ಗುರುವಾಯನಕೆರೆಯಲ್ಲಿ ಮುಂಜಾನೆಯಲ್ಲಿ ಭೀಕರ ರಸ್ತೆ ಅಪಘಾತ | ಓರ್ವ ಸಾವು

ಬೆಳ್ತಂಗಡಿ : ಗುರುವಾಯನಕೆರೆಯಲ್ಲಿ ಬೆಳ್ಳಂಬೆಳಿಗ್ಗೆ 6.30 ಕ್ಕೆ ಭೀಕರ ರಸ್ತೆ ಅಪಘಾತ ಸಂಭವಿಸಿ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗುರುವಾಯನಕೆರೆಯ ಬಸ್ ಸ್ಟ್ಯಾಂಡಿನ ಪಕ್ಕದ ಜ್ಯೂಸ್ ಸೆಂಟರ್ ನಡೆಸುತ್ತಿದ್ದವರ ಸಂಬಂಧಿಕರೊಬ್ಬರು ಸ್ಕೂಟಿಯಲ್ಲಿ ಅಗತ್ಯ ಸಾಮಾಗ್ರಿಗಳನ್ನು ಕೊಂಡೊಯುತ್ತಿದ್ದ ಸಂಧರ್ಭದಲ್ಲಿ ಈ ಅಪಘಾತ ನಡೆದಿದೆ.

ಗುರುವಾಯನಕೆರೆಯ ಸ್ಯಾನಿಟರಿ ಶೋ ರೂಂನ ಎದುರು, ರಸ್ತೆಯಲ್ಲಿ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿಯಾಗಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು, ಶನಿವಾರ ಮುಂಜಾನೆ ನಡೆದಿದೆ. ಲಾರಿ ಸಮೇತ ಸವಾರ ಪರಾರಿಯಾಗಿದ್ದಾನೆ.

ಲಾರಿಯ ಚಕ್ರ ಬೈಕ್ ಸವಾರನ ತಲೆಯ ಮೇಲೆ ಹರಿದು ಹೋಗಿ ಸ್ಥಳದಲ್ಲಿ ಭೀಕರ ವಾತಾವರಣ ಸೃಷ್ಟಿಸಿತ್ತು.

ಮೃತ ವ್ಯಕ್ತಿಯನ್ನು, ಎಟಿಎಂ ಸೆಕ್ಯೂರಿಟಿ ಗಾರ್ಡ್ ಆಗಿರುವ ಲಿಂಗಪ್ಪ ಮೂಲ್ಯ (62 ವ) ಎಂದು ಗುರುತಿಸಲಾಗಿದೆ.

Leave A Reply

Your email address will not be published.