ಬಾಳಿಲದ ಪಂಡಿತರು ಖ್ಯಾತ ವೈದ್ಯ ಪಿ.ಜಿ.ಎಸ್.ಪ್ರಕಾಶ್ ವಿಧಿವಶ

ಸುಳ್ಯ; ಬಾಳಿಲದ ದಿ. ಪಾಟಾಜೆ ಗೋವಿಂದಯ್ಯನವರ ಪುತ್ರ ಬಾಳಿಲದಲ್ಲಿ ಚಿಕಿತ್ಸಾ ಕ್ಲಿನಿಕನ್ನು ನಡೆಸುತ್ತಿದ್ದ ವೈದ್ಯ ಡಾ. ಪಿ.ಜಿ.ಎಸ್. ಪ್ರಕಾಶ್ (59) ಎ.29ರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ಮೃತರು ಹಲವಾರು ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದು, ಕಳಂಜ, ಬಾಳಿಲ, ಮುಪ್ಪೇರ್ಯ ಸೇರಿದಂತೆ ಸುತ್ತ ಮುತ್ತಲಿನ ಜನರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಾ ಜನಾನುರಾಗಿ ವೈದ್ಯರಾಗಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಸಹೋದರರಾದ ಪಿ.ಜಿ.ಎಸ್.ಎನ್. ಪ್ರಸಾದ್, ಡಾ. ಪಿ.ಜಿ.ಎಸ್. ಪ್ರಸನ್ನ, ಓರ್ವ ಸಹೋದರಿ ಸೇರಿದಂತೆ ಕುಟುಂಬ ವರ್ಗವನ್ನು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Leave A Reply

Your email address will not be published.