ಸವಣೂರು ಪ್ರೇರಣಾ ಸೋಲಾರ್ ಮಾಲಕ ದೇವಿಕಿರಣ್ ಶೆಟ್ಟಿ ವಿಧಿ ವಶ

ಸವಣೂರು ಪ್ರೇರಣಾ ಸೋಲಾರ್ ಮಾಲಕ ದೇವಿಕಿರಣ್ ಶೆಟ್ಟಿ (29) ಹೃದಯಾಘಾತದಿಂದ ರವಿವಾರ ನಿಧನರಾದರು. ಎದೆ ನೋವು ಕಾಣಿಸಿಕೊಂಡ ಇವರನ್ನು ಬೆಳ್ಳಾರೆಯ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ಅಲ್ಲಿಂದ ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆಂದು ತಿಳಿಸಿದರು.

ಮೃತರು ತಂದೆ, ತಾಯಿ, ಅಜ್ಜಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ನಾರಾಯಣ ರೈ ಅವರ ಪುತ್ರರಾದ ಇವರು ಸವಣೂರಿನಲ್ಲಿ ಪ್ರೇರಣಾ ಸೋಲಾರ್ ಸಂಸ್ಥೆ ನಡೆಸುತ್ತಿದ್ದರು.

ಮಗುವಿನಂತಹ ಮನಸ್ಸಿನ, ಎಲ್ಲರೊಂದಿಗೂ ಗೆಳೆತನ ಇಟ್ಟುಕೊಂಡಿದ್ದ, ಇವರು ಕುಟುಂಬದ ಏಕಮಾತ್ರ ಮಗನಾಗಿದ್ದರು. ಈಗ ಚಿಕ್ಕ ಪ್ರಾಯದಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಭಾವಪೂರ್ಣ ಶ್ರದ್ಧಾಂಜಲಿ

ಹೊಸ ಕನ್ನಡ ಪತ್ರಿಕೆ ಪ್ರಾರಂಭವಾದಂದಿನಿಂದಲೂ ಅವರು ನಮ್ಮ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಶ್ರಮಿಸುತ್ತಿದ್ದರು. ಅವರ ಅಗಲಿಕೆ ಅವರ ಕುಟುಂಬಕ್ಕೆ ಮತ್ತು ಗೆಳೆಯರ ಬಳಗಕ್ಕೆ ಮಾತ್ರ ಅಲ್ಲ ನಮಗೂ ಅದು ಭರಿಸಲಾರದ ನೋವು ತಂದಿದೆ. ವಿಧಿಯ ಕ್ರೂರ ಆಟಕ್ಕೆ ಈಗ ನಮ್ಮಲ್ಲಿ ಉಳಿದಿರುವುದು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೊರುವುದಷ್ಟೇ. ಓಂ ಶಾಂತಿ.

Leave A Reply

Your email address will not be published.