ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕೊರೋನಾ ನಿಯಂತ್ರಣದ ಪಾತ್ರಕ್ಕಾಗಿ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ದೊರೆಯಬೇಕು | ಹರೀಶ್ ಪೂಂಜಾ

ಕೋವಿಡ್19 ಮಾಹಾಮಾರಿಯ ವಿರುದ್ಧದ ಹೋರಾಟದಲ್ಲಿ ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪಾತ್ರಕ್ಕಾಗಿ ಅವರಿಗೆ ನೋಬಲ್ ಶಾಂತಿ ಪುರಸ್ಕಾರ ದೊರೆಯಬೇಕು ಎನ್ನುವುದು ನನ್ನ ದೃಢ ಅಭಿಪ್ರಾಯ. ನಿಮ್ಮ ಅಭಿಪ್ರಾಯವೇನು? ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರು ಟ್ವೀಟ್ ಮಾಡಿದ್ದಾರೆ.

ಇಂತದ್ದೊಂದು ಚರ್ಚೆಯನ್ನು ಬೆಳ್ತಂಗಡಿಯ ಶಾಸಕ ಶ್ರೀಯುತ ಹರೀಶ್ ಪೂಂಜಾ ಅವರು ಹುಟ್ಟುಹಾಕಿದ್ದಾರೆ.

ಇವತ್ತಿನ ಸನ್ನಿವೇಶದಲ್ಲಿ ನಾವು, ಪ್ರಪಂಚದ ಬಲಿಷ್ಟ ಮತ್ತು ತಾಂತ್ರಿಕವಾಗಿ ಮತ್ತು ವೈದ್ಯಕೀಯವಾಗಿ ಉತ್ಕೃಷ್ಟ ಮಟ್ಟದ ಸವಲತ್ತುಗಳನ್ನು ಹೊಂದಿರುವ ದೇಶವನ್ನು ಕೂಡ ಕ್ರಿಮಿಯೊಂದು ಅದ್ಯಾವ ಪರಿ ಕಾಡಿ ಅದೆಷ್ಟು ಸಾವು ನೋವುಗಳನ್ನು ತಂಡಿಡಬಲ್ಲದು ಎಂದು ನಾವು ಕಂಡಿದ್ದೇವೆ. ಇವತ್ತಿಗೆ ಅಮೆರಿಕಾದಲ್ಲಿ 55000 ಕ್ಕೂ ಮಿಕ್ಕಿದ ಸಾವಾಗಿದೆ. ನಂತರದ ಸ್ಥಾನದಲ್ಲಿರುವ ಇಟಲಿಯಲ್ಲಿ 26600 ಕ್ಕೂ ಅಧಿಕ. ಸ್ಪೈನ್ ನಲ್ಲಿ 23000 ಜನರು ನರಳಿ ನರಳಿ ತೀರಿಕೊಂಡಿದ್ದಾರೆ. ಫ್ರಾನ್ಸ್ 22500, ಇಂಗ್ಲೆಂಡ್ 20500 ! ಇವೆಲ್ಲ ಅಡ್ವಾನ್ಸ್ಡ್ ದೇಶಗಳು. ವಿರಳ ಜನಸಂಖ್ಯೆಯ, ಸುಶಿಕ್ಷಿತ, ಏಕ ರೂಪದ ಸಂಸ್ಕೃತಿಯುಳ್ಳ, ಭಾಷಾವಾರು ಪ್ರಾಂತ್ಯಗಳಿಲ್ಲದ ದೇಶಗಳು.

ನಮ್ಮ ದೇಶದಲ್ಲಂತೂ ಒಂದು ಜಿಲ್ಲೆಯಲ್ಲೇ ಇದೆ
ಹಲವು ಭಾಷೆಗಳು. ಬೀದಿಗೊಂದು ಪಕ್ಷಗಳು, ವಿಭಿನ್ನ ಸಿದ್ದಾಂತಗಳು. ತುಂಬಿಕೊಂಡ 138 ಕೋಟಿ ಜನಸಂಖ್ಯೆ !! ಹಲವು ವೈವಿಧ್ಯಮಯ ಮತ್ತು ವೈರುಧ್ಯ ಸಂಸ್ಕೃತಿಗಳು ಒಟ್ಟಾಗಿ ಇರಬೇಕಾದಂತಹಾ ಸನ್ನಿವೇಶ ನಮ್ಮದು.

ಭಾರತದ ಇಂದಿನ ಕ್ಲಿಷ್ಟ ಪರಿಸ್ಥಿತಿಯಲ್ಲಿ ಒಂದೊಮ್ಮೆ ನರೇಂದ್ರಮೋದಿಯವರ ಬದಲಾಗಿ ಬೇರೆಯದೇ ನಾಯಕತ್ವ ಇದ್ದಿದ್ದರೆ ಆಗ ಭಾರತದಲ್ಲಿ ಕೊರೋನಾ ವಿರುದ್ಧದ ಹೋರಾಟ ಹೇಗಿರುತ್ತಿತ್ತು ? ಎಂಬ ಯೋಚನೆ, ಒಂದಿಷ್ಟು ಕುತೂಹಲ ನಮ್ಮಲ್ಲಿ ಹಲವು ಬಾರಿ ಮೂಡುತ್ತಿತ್ತು.

ದೇಶದ ಹಲವು ನಾಯಕರುಗಳನ್ನು ನಾವು ಮಾನಸಿಕವಾಗಿ ಪ್ರಧಾನಿಯ ಕುರ್ಚಿಯಲ್ಲಿ ಕುಳ್ಳಿರಿಸಿ, ಇವರಿದ್ದರೆ ಹೀಗೆ ಮಾಡುತ್ತಿದ್ದರು. ಅವರಿದ್ದರೆ ಹಾಗೆ. ಹೀಗೆ ತೂಕಿ ತುಲನೆ ಮಾಡಿ ನೋಡಿದಾಗ ಒಂದು ಅಂಶವಂತೂ ಮೂಡಿ ನಿಂತಿದೆ : ಮೋದಿಯವರ ನಾಯಕತ್ವ ನಮಗೆ ಇಂತಹಾ ಸಂದರ್ಭದಲ್ಲಿ ಇಲ್ಲದೆ ಹೋಗಿದ್ದರೆ, ಅವರು ಲಾಕ್ ಡೌನ್ ಅನ್ನು ಘೋಷಿಸದೆ ಹೋಗಿದ್ದರೆ, ಪರಿಣಾಮಗಳನ್ನು ಊಹಿಸಿಕೊಳ್ಳಲೂ ಕೂಡ ಭಯವಾಗುತ್ತಿದೆ. ಆವಾಗ, ಇವತ್ತಿನ ಅಮೆರಿಕಾದ ಸ್ಥಿತಿಗಿಂತ ಹತ್ತು ಪಟ್ಟು ದೊಡ್ಡ ಮಟ್ಟದ ಡ್ಯಾಮೇಜ್ ನಮಗೆ ಆಗುತ್ತಿತ್ತು. ಅದೆಷ್ಟು ಸಾವು ನೋವು ಆಗಿರಬಹುದು ಎಂಬುದನ್ನು ನೀವೇ ಲೆಕ್ಕ ಹಾಕಿಕೊಳ್ಳಿ.

ಈಗ ನರೇಂದ್ರ ಮೋದಿಯವರು ತಮ್ಮ ಬಲಿಷ್ಟ ಮತ್ತು ಕ್ಷಿಪ್ರ ನಿರ್ಧಾರದಿಂದ ದೇಶದ ಜನರ ಪ್ರಾಣ ಉಳಿಸಿದ್ದಾರೆ. ದೇಶದ ಜನರನ್ನು ಜನತಾ ಕರ್ಫ್ಯೂ ಗೆ ಕರೆಕೊಟ್ಟ ದಿನದಿಂದಲೇ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಇನ್ನಷ್ಟು ದೇಶಗಳಿಗೆ ಅವರ ನಿರ್ಧಾರ ಮಾದರಿಯಾಗಿದೆ. ಅವರ ನಿರ್ಧಾರದಿಂದ ಸ್ಫೂರ್ತಿ ಹೊಂದಿ ಮತ್ತಷ್ಟು ದೇಶಗಳು ಭಾರತವನ್ನು ಫಾಲೋ ಮಾಡಿವೆ. ವಿಶ್ವ ಸಂಸ್ಥೆ ಕೂಡಾ ಭಾರತದ ನಾಯಕನತ್ತ ಆಶ್ಚರ್ಯದಿಂದ ನೋಡಿದೆ.

ಇವನ್ನೆಲ್ಲ ಗಮನಿಸಿದಾಗ ನಮಗನ್ನಿಸುವುದು ಸಹಜ : ಈ ವಿಶ್ವ ನಾಯಕನಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವುದು ಪ್ರಶಸ್ತಿಗೂ ಗೌರವ ಕೊಟ್ಟಂತೆ. ಜನರ ಪ್ರಾಣ ಉಳಿಸುವುದಕ್ಕಿಂತ ದೊಡ್ಡ ಬೇರೆ ಸಾಧನೆ ಏನು ಬೇಕು ? ಅದನ್ನು ನರೇಂದ್ರ ಮೋದಿಯವರು ದೊಡ್ಡ ಮಟ್ಟದಲ್ಲಿ ಮಾಡಿದ್ದಾರೆ.

ಪಕ್ಷಗಳನ್ನು ಪಕ್ಕಕ್ಕೆ ಸರಿಸಿ, ಧರ್ಮವನ್ನು ದೂರದಲ್ಲಿ ಇಟ್ಟು, ಮನುಷ್ಯತ್ವವನ್ನು ಮುಂದಕ್ಕೆ ಬಿಟ್ಟು ಯೋಚಿಸೋಣ. ನರೇಂದ್ರ ದಾಮೋದರ ದಾಸ್ ಮೋದಿ ಎಂಬ ಪರಿವ್ರಾಜಕ ಮನಸ್ಸಿನ ಪ್ರಧಾನಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಲಿ ಎಂದು ಹಾರೈಸೋಣ.

https://hosakannada.com/2020/04/26/paada-pooje-powra-karmika/

Leave A Reply

Your email address will not be published.