ಉಪ್ಪಿನಂಗಡಿಯಿಂದ ಸುಳ್ಯದ ನೆಂಟರ ಮನೆಗೆ ಬಂದ ಮಹಿಳೆ ಲಾಕ್ | 14 ದಿನಗಳ ಹೋಂ ಕ್ವಾರಂಟೈನ್ ಗೆ ಸೂಚನೆ

ಸುಳ್ಯ : ಉಪ್ಪಿನಂಗಡಿಯಿಂದ ನೆಲ್ಲೂರು ಕೆಮ್ರಾಜೆಗೆ ಬಂದ ಮಹಿಳೆಯನ್ನು 14 ದಿನ ಕಾಲ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆ.

ಈಗಾಗಲೇ ರೆಡ್ ಝೋನ್ ಎಂದು ಗುರುತಿಸಲಾದ ಉಪ್ಪಿನಂಗಡಿ ಪ್ರದೇಶದಿಂದ ಯಾರು ಕೂಡ ಬೇರೆ ಊರಿಗೆ ಹೋಗಬಾರದು ಮತ್ತು ಬೇರೆ ಊರಿನಿಂದ ಉಪ್ಪಿನಂಗಡಿಗೆ ಯಾರು ಬಾರದಂತೆ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದೆ.

ಪರಿಸ್ಥಿತಿ ಹಾಗಿರುವಾಗ ಉಪ್ಪಿನಂಗಡಿಯ ಮಹಿಳೆಯೊಬ್ಬಳು ನೆಂಟರ ಮನೆಗೆಂದು ಸುಳ್ಯದ ನೆಲ್ಲೂರು ಕೆಮ್ರಾಜೆ ಗ್ರಾಮದ ಹರ್ಲಡ್ಕ ಎಂಬಲ್ಲಿಗೆ ಬಂದಿದ್ದಳು. ಹಾಗಾಗಿ ರೆಡ್ ಜೋನ್ ಪ್ರದೇಶದಿಂದ ಬಂದ ಕಾರಣ ಕೊರೋನಾ ಸೋಂಕಿನ ಅನುಮಾನದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕೋರೋನಾ ಕಾರ್ಯಪಡೆ ಮತ್ತು ಅಧಿಕಾರಿಗಳ ತಂಡ ಆಕೆಯ ಮನೆಗೆ ಭೇಟಿ ನೀಡಿ ಆಕೆಯನ್ನು14 ದಿನಗಳ ಕಾಲ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ.

Leave A Reply

Your email address will not be published.