ದಕ್ಷಿಣ ಕನ್ನಡ ಮತ್ತೊಂದು ಕೊರೊನ ಪಾಸಿಟಿವ್ ಪ್ರಕರಣ

ಮಂಗಳೂರು, ಎ.23. ಕರಾವಳಿಯಲ್ಲಿ ಇಂದು ಗುರುವಾರದಂದು ಮತ್ತೊಂದು ಕೊರೋನಾ ಪಾಸಿಟಿವ್ ಪತ್ತೆಯಾಗಿ ದಕ್ಷಿಣ ಕನ್ನಡವನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಮೊನ್ನೆ ಬಂಟ್ವಾಳದ ಮೃತ ಮಹಿಳೆಯ ಸಂಬಂಧಿಯಾದ 75 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.

ಈಕೆ ಪಾರ್ಶ್ವವಾಯುಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೋನಾ ಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ.

ಈ ಮೂಲಕ ದಕ್ಷಿಣ ಕನ್ನಡದಲ್ಲಿ ಒಟ್ಟು 17 ಕೋರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಅವರಲ್ಲಿ, ಬಂಟ್ವಾಳದ 50 ವರ್ಷ ವಯಸ್ಸಿನ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಈಗ ಒಟ್ಟು 4 ಜನ ಚಿಕಿತ್ಸೆಯಲ್ಲಿದ್ದಾರೆ. ಒಟ್ಟು 12 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಕರ್ನಾಟಕದಲ್ಲಿ ಸೊಂಕಿತರ ಸಂಖ್ಯೆ443 ಕ್ಕೆ ಏರಿದೆ.

Leave A Reply