ಸುಳ್ಯ | ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದರಿಂದ ಪಂಪು ಹೌಸಿಗೆ ಭೇಟಿ ನೀಡಿದ ನಗರ ಪಂಚಾಯತ್ ಸದಸ್ಯರು
ಸುಳ್ಯದ ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು,ಈ ಕುರಿತು ನ.ಪಂ ಸದಸ್ಯರುಗಳಾದ ವೆಂಕಪ್ಪ ಗೌಡ, ವಿನಯ್ ಕುಮಾರ್ ಕಂದಡ್ಕ ,ಶರೀಫ್ ಕಂಠಿ ನ. ಪಂ ಪಂಪು ಹೌಸ್ ಗೆ ಭೇಟಿ ನೀಡಿದರು.
ಈ ಬಗ್ಗೆ ಮಾಹಿತಿ ತಿಳಿದು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಶೀಘ್ರದಲ್ಲಿ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ವಿನಂತಿಸಿಕೊಂಡರು. ಹಾಗೂ ಮಾಹಿತಿ ತಿಳಿದ ಪ್ರಕಾರ ಈಗಾಗಲೇ ಪಂಪ್ ಹೌಸಿನಲ್ಲಿ ನಲ್ಲಿ ಎರಡು ಮೋಟಾರುಗಳು ಕಾರ್ಯಾಚರಿಸುತ್ತಿದ್ದು ಅದರಲ್ಲಿ ಒಂದು ದುರಸ್ತಿಗೋಳಗಾಗಿದ್ದು, ಕೇವಲ ಇನ್ನೊಂದು ಮೋಟಾರಿನ ಮೂಲಕ ನಗರಕ್ಕೆ ನೀರನ್ನು ಹಂಚಲಾಗುತ್ತಿದೆ .ಇದರ ದುರಸ್ತಿಗೆ ಮಂಗಳೂರಿನಿಂದ ಸಂಬಂಧಪಟ್ಟವರು ಬರಬೇಕಾದರೆ ಲಾಕ್ಡೌನ್ ಇರುವ ಕಾರಣ ಇಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಪುತ್ತೂರಿನಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಪಂಚಾಯತಿ ಸದಸ್ಯರುಗಳಾದ ವೆಂಕಪ್ಪಗೌಡ ಹಾಗೂ ವಿನಯಕುಮಾರ್ ಕಂದಡ್ಕ ದೂರವಾಣಿ ಮೂಲಕ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅತಿ ಶೀಘ್ರದಲ್ಲಿ ಮೋಟಾರಿನ ದುರಸ್ತಿ ಕಾರ್ಯವನ್ನು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ನ ಪಂ ಇಂಜಿನಿಯರ್ ಶಿವಕುಮಾರ್ ಹಾಗು ಪಂಪು ಹೌಸಿನ ಸಿಬ್ಬಂದಿಗಳು, ಕೆರೆಮೂಲೆ ವಾರ್ಡಿನ ನಿವಾಸಿಗಳಾದ ಸೈಯೃದ್ ಪಾರೆ .ಜಲೀಲ್, ಮನ್ಸೂರ್.ಮುನೀರ್ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಹಸೈನಾರ್ ಜಯನಗರ