ಉದನೆ ಉದ್ವಿಗ್ನ | ಸೀಲ್ ಡೌನ್ ಆದ ಉಪ್ಪಿನಂಗಡಿಯಿಂದ ಬಂದು ಅಡಿಕೆ ವ್ಯಾಪಾರ ಮಾಡುವ ವ್ಯಕ್ತಿ

ಈಗಾಗಲೇ ಸೀಲ್ ಡೌನ್ ಆಗಿರುವ ಉಪ್ಪಿನಂಗಡಿಯಿಂದ ದಿನವೂ ಉದನೆಗೆ ಬಂದು ಅಲ್ಲಿ ಅಡಿಕೆ ಕೊಕ್ಕೊ ಗೇರುಬೀಜ ಮತ್ತು ಕಾಡುತ್ಪತ್ತಿ ವ್ಯಾಪಾರ ಮಾಡುತ್ತಿರುವ ಬಶೀರ್ ಎಂಬಾತನ ಬಗ್ಗೆ ಸುತ್ತಮುತ್ತಲ ಜನರಿಗೆ ಭಯದ ವಾತಾವರಣ ಉಂಟಾಗಿದೆ.

ಸೋಂಕಿತ ವ್ಯಕ್ತಿ ವಾಸವಿರುವ ಉಪ್ಪಿನಂಗಡಿಯಿಂದ ಅದು ಹೇಗೆ ಅವನು ಲಾಕ್ಡೌನ್ ಸೀಲ್, ಸೀಲ್ ಡೌನ್ ಉಲ್ಲಂಘಿಸಿ ಉದನೆಗೆ ಬಂದು ಮುಂಜಾನೆಯಿಂದ ಸಂಜೆ 4 ಗಂಟೆಯ ತನಕ ವ್ಯಾಪಾರ ಮಾಡುತ್ತಾನೆ ಎಂಬುದು ಅವರ ಪ್ರಶ್ನೆ. ಈ ಬಗ್ಗೆ ಉದನೆಯ ಪಿಡಿಓ ಅವರು ಈ ವ್ಯಕ್ತಿಗೆ ಸೀಲ್ ಡೌನ್ ಆದ ಉಪ್ಪಿನಂಗಡಿಯಿಂದ ಬಂದು ಇಲ್ಲಿ ವ್ಯಾಪಾರ ಮಾಡಬಾರದು ಎಂದು ವಾರ್ನಿಂಗ್ ಕೊಟ್ಟಿದ್ದರೂ ಆತ ಸರಕಾರದ ನಿರ್ದೇಶನ ಯಾವುದನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

ಅದೇ ಅಲ್ಲದೆ, ಆತನಿಗೂ ಸೋಂಕಿತ ಉಪ್ಪಿನಂಗಡಿಯ ವಕೀಲರಿಗೂ ಹತ್ತಿರದ ವ್ಯಾವಹಾರಿಕ ಸಂಬಂಧ ಇದೆ ಎನ್ನುವುದು ಊರವರ ಅಭಿಪ್ರಾಯ. ಅವರಿಬ್ಬರೂ ಒಂದೇ ಸಂಘಟನೆಯಲ್ಲಿ ತೊಡಗಿಕೊಂಡವರು ಎಂಬ ಗಾಢ ಗುಮಾನಿ ಉದನೆ ಮತ್ತು ಸುತ್ತ ಮುತ್ತ ಹರಡಿದೆ. ಅದರಿಂದ ಜನರಲ್ಲಿ ಭೀತಿ ಹೆಚ್ಚಾಗಿದೆ.

ತಕ್ಷಣ ತಾಲೂಕು ಆಡಳಿತ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ, ಅನ್ಯ ಊರಿನಿಂದ ಲಾಕ್ ಡೌನ್ ಉಲ್ಲಂಘಿಸಿ ಬರುವ ಬಶೀರ್ ನನ್ನ ಮನೆಗೆ ಕಳುಹಿಸಿ ಹೋಂ ಕ್ವಾರಂಟೈನ್ ಗೆ ಕಲಿಸಬೇಕೆಂದು ಉದನೆಯ ಪ್ರಜ್ಞಾವಂತ ನಾಗರಿಕರ ಒತ್ತಾಯ ಮಾಡುತ್ತಿದ್ದಾರೆ.

Leave A Reply

Your email address will not be published.