ಗುತ್ತಿಗಾರು ಕಿರಣ್ ಸಂಸ್ಥೆ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ
ಕಲೆ-ಸಾಹಿತ್ಯ ಸಾಮಾಜಿಕವಾಗಿ ಸಕ್ರಿಯವಾಗಿರುವ ಗುತ್ತಿಗಾರಿನ ಕಿರಣ ರಂಗ ಅಧ್ಯಯನ ಸಂಸ್ಥೆ ವತಿಯಿಂದ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ನಡೆಯಿತು. ದೇಶದಾದ್ಯಂತ ಕರೋನವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಸಮಯದಲ್ಲಿ ದೇಶಕ್ಕೆ ದೇಶವೇ ತತ್ತರಿಸಿಹೋಗಿದೆ .ಈ ಸಮಯದಲ್ಲಿ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕಷ್ಟದಲ್ಲಿರುವ ಆಯ್ದ ಹತ್ತು ಕುಟುಂಬಗಳಿಗೆ ಕಿರಣ ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯದ ಭಾಗವಾಗಿ ಅಧ್ಯಕ್ಷ ಯೋಗೀಶ್ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂತಹ ತುರ್ತು ಪರಿಸ್ಥಿತಿಯಲ್ಲಿ ಬಡವ ಶ್ರೀಮಂತರೆಂಬ ಭೇಧವಿಲ್ಲದೆ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟವಾಗುತ್ತಿದೆ .ಅದರಲ್ಲಿ ವಲಸೆಗಾರರು ,ದಿನಗೂಲಿ ನೌಕರರ, ಸ್ಥಿತಿ ಗಂಭೀರವಾಗಿದೆ .ಈ ಸಮಯದಲ್ಲಿ ಸಂಸ್ಥೆಯ ಮೂಲಕ ಸಣ್ಣ ಸೇವೆ ಮಾಡಿರುತ್ತೇವೆ. ದಾನ-ಧರ್ಮಕ್ಕೆ ಮನಸ್ಸು ಮುಖ್ಯ. ಸರಕಾರದ ನಿಯಮ ಪಾಲನೆ ಯೊಂದಿಗೆ ಈ ರೀತಿಯ ಸಹಕಾರವನ್ನು ಮಾಡುವುದು ಪ್ರತಿಯೊಬ್ಬನ ಕರ್ತವ್ಯ ಎಂದು ಅವರು ಹೇಳಿದರು.