ಸುಳ್ಯ| ಕೀರ್ತನಾ ಕೆಟರರ್ಸ್ ವತಿಯಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ

Share the Article


ಕೋರೋಣ ಎಂಬ ಮಾರಕ ರೋಗಕ್ಕೆ ತುತ್ತಾಗಿ ಇಡೀ ದೇಶದ ಜನತೆ ಬಹಳ ಸಂಕಷ್ಟದಲ್ಲಿ ಸಿಲುಕಿರುವ ಈ ಸಂದರ್ಭದಲ್ಲಿ ಕಡುಬಡತನ ಹಾಗೂ ದಿನಗೂಲಿ ಕಾರ್ಮಿಕರ ಸ್ಥಿತಿ ಬಹಳ ಕಷ್ಟಕರವಾಗಿ ರುವುದನ್ನು ಗಮನಿಸಿ ಜಾತಿ-ಮತ ಬೇದವಿಲ್ಲದೆ ಸುಮಾರು 280 ಅರ್ಹ ಕುಟುಂಬಕ್ಕೆ ದಿನಬಳಕೆಯ ಆಹಾರ ಸಾಮಗ್ರಿಗಳನ್ನು ನೀಡಿ ಸಹಕರಿಸಿದ್ದಾರೆ.ಸುಳ್ಯ ಕೊಡಿಯಾಲಬೈಲು ಕೀರ್ತನಾ ಕೇಟರರ್ಸ್ ಮಾಲಕ ಹರಿಪ್ರಸಾದ್ ರವರು ತಮ್ಮ ಸಂಸ್ಥೆಯ ವತಿಯಿಂದ ಜಯನಗರ ಹಾಗೂ ನಾರಾಜೆ ಪರಿಸರದ ಸುಮಾರು 180 ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿಗೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ವಿತರಣೆಯನ್ನು ಏಪ್ರಿಲ್ 19ರಂದು ವಿತರಿಸಿದರು.
ಫಲಾನುಭವಿಗಳ ಸಂಖ್ಯೆ ಹೆಚ್ಚಿರುವ ಕಾರಣ ನಾಳೆಯೂ ಕೂಡ ಸುಮಾರು ನೂರಕ್ಕೂ ಹೆಚ್ಚು ಕಿಟ್ ಗಳನ್ನು ತಯಾರಿಸಿ ವಿತರಿಸಲಾಗುವುದು ಎಂದು ಅವರು ಹೇಳಿದರು.

Leave A Reply

Your email address will not be published.