ದೆಹಲಿಯಿಂದ ದೇಶಾದ್ಯಂತ ಕೋರೋನಾ ಸೋಂಕು ಹಬ್ಬಲು ಕಾರಣವಾದ ತಬ್ಲಿಘಿ ಗಳ ಬಗ್ಗೆ ಮೌನ ಇರುವ ಕಾಂಗ್ರೆಸ್ ನಾಯಕನ ಮೇಲೆ ಕಿಶೋರ್ ಶಿರಾಡಿ ಆಕ್ರೋಶ

ಮೊನ್ನೆ ಪುತ್ತೂರು ತಾಲೂಕು ಕಾಂಗ್ರೆಸ್ ನ ಯುವ ಅಧ್ಯಕ್ಷ ಯು.ಟಿ.ತೌಸೀಫ್ ಅವರ ಹೇಳಿಕೆಯ ಮೇಲೆ ಹಲವು ಆಕ್ರೋಶದ ಮಾತುಗಳು ಕೇಳಿಬಂದಿದ್ದು, ಪರಿಸರ ಹೋರಾಟಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಶಿರಾಡಿ ಕಿಶೋರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

” ಉಪ್ಪಿನಂಗಡಿಯ ಕೋರೋನಾ ಸೋಂಕಿತ ವ್ಯಕ್ತಿಯ ಪರವಾಗಿ ಹೇಳಿಕೆ ನೀಡಿರುವ ಮಾನ್ಯ ಯು.ಟಿ.ತೌಸೀಫ್ ಅವರು ಹೇಳಿದ ಮಾತು, ಅದೊಂದು ಕೆಟ್ಟ ಸಾಂಪ್ರದಾಯಿಕ ರಾಜಕೀಯ ಪ್ರೇರಿತ ಹೇಳಿಕೆ. ಅದನ್ನು ನಾನು ಅದನ್ನು ಖಂಡಿಸುತ್ತೇನೆ. ಯಾಕೆಂದರೆ ದೆಹಲಿಯಲ್ಲಿ ಅಂದು ನಡೆದಿದ್ದ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದ ಹೆಚ್ಚಿನ ಜನರಿಗೆ ಸೋಂಕು ತಗಲೀರುತ್ತದೆ. ಅಲ್ಲಿಂದ ಅವರು ತಮ್ಮ ತಮ್ಮ ಊರಿಗೆ ಬಂದ ನಂತರ, ಸರಕಾರ ಅವರೆಲ್ಲರ ಮಾಹಿತಿ ಪಡೆದುಕೊಳ್ಳುವ ಸಂದರ್ಭದಲ್ಲಿ ಅನೇಕ ಜನರು ಕಾನೂನಿನ ಕೈಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿರುತ್ತಾರೆ. ಕೆಲವರು ಇನ್ನೂ ಕೂಡ ಸಿಕ್ಕಿಲ್ಲ. ಪರಿಸ್ಥಿತಿ ಹೀಗಿರುವಾಗ ಈ ಕಾರ್ಯಕ್ರಮಕ್ಕೆ ಹೋದವರ ಬಗ್ಗೆಯಾಗಲಿ, ಹೋಗಿ ಬಂದು ತಲೆ ತಪ್ಪಿಸಿಕೊಂಡವರ ಬಗ್ಗೆಯಾಗಲೀ, ಕಾರ್ಯಕ್ರಮ ನಡೆಸಿದವರ ಬಗ್ಗೆಯಾಗಲಿ, ಮಾನ್ಯ ತೌಸೀಫ್ ಅವರು ಯಾವುದೇ ರೀತಿಯ ಹೇಳಿಕೆಯನ್ನಾಗಲಿ, ಖಂಡನೆಯನ್ನಾಗಲಿ ಮಾಡಿಲ್ಲ.”

” ಆದರೆ ಮೊನ್ನೆ ಉಪ್ಪಿನಂಗಡಿಯ ಸೋಂಕಿತ ವ್ಯಕ್ತಿಯ ಪರವಾಗಿ ಇವರು ನೀಡಿರುವ ಹೇಳಿಕೆ ನೋಡಿದರೆ, ಅದೊಂದು ಪಕ್ಕಾ ರಾಜಕೀಯ ಪ್ರೇರಿತವಾದ ಕೀಳು ಮನಸ್ಥಿತಿಯ ಹೇಳಿಕೆ ಎನ್ನುವುದು ಸ್ಪಷ್ಟ. ತನಗೆ ಹೋಂ ಕ್ವಾರಂಟೈನ್ ಆದ ಸಂದರ್ಭದಲ್ಲಿ ನಿಯಮ ಮೀರಿದ್ದರೆ, ಸ್ವತಹ ಸೋಂಕಿತ ವ್ಯಕ್ತಿಯೇ ಹೇಳಬಹುದಿತ್ತು. ತೌಸೀಫ್ ಅವರೇನು ಉಪ್ಪಿನಂಗಡಿಯ ಸೋಂಕಿತ ವ್ಯಕ್ತಿಯ ಮಾಧ್ಯಮ ವಕ್ತಾರರಾ ? ದೇಶದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೋರೋನಾ ವೈರಸ್ ವಿರುದ್ಧ ಮಾಡುವ ಹೋರಾಟದಲ್ಲಿ ಅಸಹಕಾರ ತೋರುತ್ತಿರುವ ತಬ್ಲಿಘಿ ಗಳ ಬಗ್ಗೆ ಚಕಾರ ಎತ್ತದ ಇವರು ಯಾವ ಸೀಮೆಯ ಯುವ ನಾಯಕ ? “

ಇವತ್ತು ಇವರ ಓಲೈಕೆ ರಾಜಕೀಯ ಜನರ ಮುಂದೆ ಬಟಾಬಯಲಾಗಿದೆ. ಇವರ ನಡೆಯನ್ನು ಗಮನಿಸಿದರೆ ಇವರು ತಬ್ಲಿ ಘಿ ಗಳನ್ನು ಮೌನವಾಗಿ ಸಮರ್ಥಿಸಿಕೊಂಡಂತೆ ಭಾವನೆ ಮೂಡುತ್ತಿದೆ. ಸಾಮಾನ್ಯ ಜನರಿಗೂ ಇರುವ ಪ್ರಜ್ಞೆ ಇವರಿಗೆ ದೇವರು ಕೊಟ್ಟಿಲ್ಲವಲ್ಲ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.

ಇದೀಗ ಉಪ್ಪಿನಂಗಡಿಯ ಕೋರೋನಾ ಸೋಂಕಿತ ವ್ಯಕ್ತಿಯ ಹೆಂಡತಿಗೂ ಸೋಂಕು ತಗುಲಿರುವುದರಿಂದ ಯು.ಟಿ.ತೌಸೀಫ್ ಅವರು ಹಸಿ ಸುಳ್ಳುಗಾರ ಎನ್ನುವುದು ಖಚಿತವಾಗಿದೆ. ಆದುದರಿಂದ ಅವರು ತಕ್ಷಣ ಸಾರ್ವಜನಿಕರ ಮತ್ತು ಜಿಲ್ಲಾಡಳಿತದ ಕ್ಷಮೆಯಾಚಿಸಬೇಕು. ಆ ಮೂಲಕ ಹೋದ ಮಾನವನ್ನು ಸ್ವಲ್ಪಮಟ್ಟಿಗಾದರೂ ಉಳಿಸಿಕೊಳ್ಳಬೇಕು ಎಂದು ಕಿಶೋರ್ ಶಿರಾಡಿಯವರು ಆಗ್ರಹಿಸಿದ್ದಾರೆ.

Comments are closed.