ಬೆಳ್ಳಾರೆ ಪೋಲೀಸರ ಮೇಲೆ ಸುಳ್ಳು ಆಪಾದನೆ | ತನಿಖೆಯಿಂದ ಬಹಿರಂಗ

ಮಂಗಳೂರು : ಬೆಳ್ಳಾರೆ ಠಾಣೆ ಪೋಲೀಸರ ಕುರಿತು ಮಾಧ್ಯಮದಲ್ಲಿ ಬಂದಿದ್ದ ವರದಿಗಳ ಆಧಾರದಲ್ಲಿ ತನಿಖೆ ನಡೆಸಿದ ಜಿಲ್ಲಾವರಿಷ್ಠಾಧಿಕಾರಿಗಳು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಸದ್ರಿ ಆರೋಪವು ಸುಳ್ಳಾಗಿದ್ದು, ಯಾರೋ ಕಿಡಿಗೇಡಿಗಳು ವಿಡಿಯೋದಲ್ಲಿ ಆರೋಪಿಸಿರುವ ವ್ಯಕ್ತಿಗಳನ್ನು ಬಳಸಿಕೊಂಡು ಪೋಲೀಸರ ವಿರುದ್ಧ ಸುಳ್ಳು ಆಪಾದನೆ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಸಾರ್ವಜನಿಕವಾಗಿ ಪೋಲೀಸರ ಮಾನಹಾನಿ ಮಾಡುವ ಕೃತ್ಯಕ್ಕೆ ಕೈಹಾಕಿದ್ದಾರೆ, ತಪ್ಪಿತಸ್ಥರ ವಿರುದ್ಧ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸ್ ಜಿಲ್ಲಾ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಈ ಕೃತ್ಯದ ಹಿಂದಿರುವ ವ್ಯಕ್ತಿಗಳು ಪೋಲೀಸರ ಮೇಲೆ ಹಳೆ ಸೇಡು ತೀರಿಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ದಕ್ಷ ಪೋಲೀಸರ ಬಗ್ಗೆ ಈ ರೀತಿ ಸುಳ್ಳು ಮಾಹಿತಿ ನೀಡಿ ಸಾರ್ವಜನಿಕವಾಗಿ ಮಾಧ್ಯಮ ಹಾಗೂ ಸಮಾಜದ ದಾರಿ ತಪ್ಪಿಸುವುದು ಖಂಡನೀಯ.

Comments are closed.