ವಿದ್ಯಾರ್ಥಿ ಬಂಟ್ಸ್ ಸಂಘದ ಅಧ್ಯಕ್ಷರಾದ ಪ್ರಣಾಮ್ ಶೆಟ್ಟಿ ಕೈಕಾರ ನೇತೃತ್ವದಲ್ಲಿ ಅಕ್ಕಿ, ದಿನಸಿ ಸಾಮಗ್ರಿ, ಮಾಸ್ಕ್ ವಿತರಣೆ

ಪುತ್ತೂರು : ವಿದ್ಯಾರ್ಥಿ ಬಂಟ್ಸ್ ಸಂಘದ ಅಧ್ಯಕ್ಷರದ ಪ್ರಣಾಮ್ ಶೆಟ್ಟಿ ಕೈಕಾರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಸಹಕಾರದೊಂದಿಗೆ 40 ಬಡ ಕುಟುಂಬಗಳಿಗೆ ಅಕ್ಕಿ, ರೇಷನ್ ಮತ್ತು ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ನೀಡಿದ ದಿನಸಿ ಸಾಮಗ್ರಿ ಕಿಟ್ ಗಳನ್ನು 40 ಬಡಕುಟುಂಬಗಳ ಮನೆ ಮನೆಗೆ ತೆರಳಿ ವಿತರಿಸಲಾಯಿತು ಮತ್ತು ಅಗತ್ಯ ಇರುವವರಿಗೆ ಮಾಸ್ಕ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಆಕಾಶ್ ರೈ ಬೈಲಾಡಿ, ಸೌರಭ್ ರೈ, ಸುದರ್ಶನ್ ಶೆಟ್ಟಿ ಕೊಮ್ಮಂಡ, ಶಶಿಕಿರಣ್ ರೈ, ಸಂದೀಪ್ ರೈ ಕೆಲ್ಲಾಡಿ ಸಹಿತ ಹಲವು ಮಂದಿ ಜೊತೆಗಿದ್ದರು.

Comments are closed.