ಪಡುವನ್ನೂರು | ಮಾಪಳದಲ್ಲಿ ಗೋಂಕುದ ಗಂಗಸರ| ಓರ್ವನ ಬಂಧನ | ಇನ್ನೊರ್ವ ಪರಾರಿ!

ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಮಾಪಳ ಎಂಬಲ್ಲಿ ಅಕ್ರಮವಾಗಿ ಗೇರು ಹಣ್ಣಿನ ಕಳ್ಳ ಭಟ್ಟಿ ತಯಾರಿಸುತ್ತಿದ್ದ ವೇಳೆ ಸಂಪ್ಯ ಪೊಲೀಸರು ದಾಳಿ ನಡೆಸಿದ್ದಾರೆ.

ಘಟನೆ ಎ.15 ರಂದು ರಾತ್ರಿ ನಡೆದಿದ್ದು ಘಟನೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಿ, ಕಳ್ಳಭಟ್ಟಿ ಸಾರಾಯಿಯನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.

ಆರೋಪಿ ಅರಿಯಡ್ಕ ಗ್ರಾಮದ ಶರತ್ ಕುಮಾರ್ (24) ಎಂಬವ ರೇ ಬಂಧಿತರಾದವರು. ಈತನ ಜೊತೆಗಿದ್ದ ಮತ್ತೋರ್ವ ಆರೋಪಿ ಕೇಶವ ಗೌಡ ಎಂಬವರು ತಲೆಮರೆಸಿಕೊಂಡಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿ ಬಂದ್ ಆಗಿದೆ.ಅದರಿಂದಾಗಿ ಕಳ್ಳಬಟ್ಟಿಗೆ ಮುಂದಾಗಿದ್ದಾರೆ.

ಘಟನಾ ಸ್ಥಳದಲ್ಲಿ 2 ಲೀಟರ್ ಪ್ರಮಾಣದ ಗೇರು ಸಾರಾಯಿ ಹಾಗೂ 200 ಲೀಟರ್ ಸಾಮರ್ಥ್ಯದ 100 ಲೀಟರ್ ಹುಳಿರಸ ಹಾಗೂ ಕಳ್ಳ ಬಟ್ಟಿ ತಯಾರಿಸಲು ಬಳಸಿದ ಪಾತ್ರೆ, ಬಟ್ಟೆ, ಮತ್ತು ರೂ. 360 ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಸಂಪ್ಯ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

Comments are closed.