ಮುಂಡೂರು ಸ್ಪರ್ಶಾ ಸಹಾಯವಾಣಿಯಿಂದ ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆ


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಪುತ್ತೂರು: ಸರ್ವೆ,ಮುಂಡೂರು,ಕೆಮ್ಮಿಂಜೆ ವ್ಯಾಪ್ತಿಯ 9ಜನ ಆಶಾ ಕಾರ್ಯಕರ್ತೆಯರನ್ನು ಸರ್ವೆ ಸ್ಪರ್ಶಾ ಸಹಾಯವಾಣಿಯ ಮುಖಾಂತರ ಅಭಿನಂದಿಸಲಾಯಿತು.

ಕೊರೋನಾದ ಭೀತಿಯಿಂದ ಎಲ್ಲರೂ ಮನೆಯ ಒಳಗಡೆ ವಿಶ್ರಮಿ ಸುತ್ತಿರುವಾಗ,ಎಲ್ಲಾ ಆಶಾ ಕಾರ್ಯಕರ್ತೆಯರು ಉರಿವ ಸುಡು ಬಿಸಿಲನ್ನು ಲೆಕ್ಕಿಸದೆ ಪ್ರತಿ ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ವಿಚಾರಿಸಿ ಸರಕಾರಕ್ಕೆ ಮಾಹಿತಿ ನೀಡುವ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದು,ಇವರ ನಿಸ್ವಾರ್ಥ ಸೇವೆಗಾಗಿ ಸಮಸ್ತ ಗ್ರಾಮಸ್ಥರ ಪರವಾಗಿ ಅವರ ಮನೋಬಲವನ್ನು ಹೆಚ್ಚಿಸುವ ಕಾರ್ಯವನ್ನು ಸ್ಪರ್ಶಾ ಸಹಾಯವಾಣಿ ಮಾಡಿದೆ.

ಈ ಸಂದರ್ಭದಲ್ಲಿ ಮುಂಡೂರು ಪಂಚಾಯತಿ ಅಧ್ಯಕ್ಷರಾದ ವಸಂತ ಎಸ್ ಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಲಿಂಗಪ್ಪಯ್ಯ, ಗ್ರಾಮಕರಣಿಕರಾದ ತುಳಸಿ, ಮುಂಡೂರು ಸಿಎ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ ರೈ ಸಹಾಯವಾಣಿಯ ಸದಸ್ಯರಾದ ಅಶೋಕ ನಾಯ್ಕ ಸೊರಕೆ, ಧನಂಜಯ ಕುಲಾಲ್,ಗ್ರಾ.ಪಂ. ಪಂಚಾಯತಿ ಸದಸ್ಯರಾದ ಮಹೇಶ್ಚಂದ್ರ ಸಾಲಿಯಾನ್ ಹಂಝ ಎಲಿಯ ಮತ್ತು ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸ್ಪರ್ಶ ಸಹಾಯವಾಣಿ ಸಂಚಾಲಕ ,ಮುಂಡೂರು ಗ್ರಾ.ಪಂ.ಸದಸ್ಯ ಶಿವನಾಥ ರೈ ಮೇಗಿನಗುತ್ತು ಸ್ವಾಗತಿಸಿ,ವಂದಿಸಿದರು.

error: Content is protected !!
Scroll to Top
%d bloggers like this: