ಪುತ್ತೂರು ಶಾಸಕರ ವಾರ್ ರೂಮ್ ಮತ್ತು ಮುಳಿಯ ಫೌಂಡೇಶನ್ ಸಹಯೋಗದಲ್ಲಿ ಹಳ್ಳಿಗಳಿಗೆ ದಿನಸಿ, ತರಕಾರಿ ಡೆಲಿವರಿ ಸರ್ವೀಸ್
ಮುಳಿಯ ಫೌಂಡೇಷನ್ ತನ್ನ ಕಾಲ್ ಸೆಂಟರ್ ಮುಖಾಂತರ ಆರ್ಡರ್ ಪಡೆದುಕೊಂಡು ದಿನಸಿ, ತರಕಾರಿ, ಹಾಗೂ ಔಷಧಗಳ ಡೆಲಿವರಿ ಸೇವೆಯನ್ನು ದಿನಾಂಕ 17/04/2020 ರಿಂದ ಪ್ರಾರಂಭಿಸಲಿದೆ.
ಪುತ್ತೂರು ಸುತ್ತ ಮುತ್ತಲಿನ ಪರಿಸರದ ಅಶಕ್ತ, ವೃದ್ಧ, ಸ್ವಂತ ವಾಹನ ಇಲ್ಲದ ನಾಗರಿಕರು ಹಾಗೂ ವೈದ್ಯರು, ಪೋಲೀಸರು, ಪೌರ ಕಾರ್ಮಿಕರಿಗೆ ಈ ಸೌಲಭ್ಯ ದೊರೆಯಲಿದೆ. ಈ ಮೇಲೆ ತಿಳಿಸಿದಂತೆ ಈ ಸೌಲಭ್ಯಗಳನ್ನು ಪಡೆಯಲು ಮುಳಿಯ ಫೌಂಡೇಶನ್ ನ ಕಾಲ್ ಸೆಂಟರ್ ನಂಬರ್ ಗೆ ಕಾಲ್ ಮಾಡಿ ತಮ್ಮ ಅವಶ್ಯಕತೆಗಳನ್ನು ಆರ್ಡರ್ ಮಾಡಬಹುದು. ಒಂದು ಮನೆಯಿಂದ ಕನಿಷ್ಠ ರೂ.300 ಹಾಗೂ ಗರಿಷ್ಠ ರೂ. 1500 ರ ( ಮೆಡಿಸಿನ್ ಹೊರತುಪಡಿಸಿ) ವಸ್ತುಗಳ ಡೆಲಿವರಿ ಆರ್ಡರ್ ಪಡೆದ ಎರಡು ದಿನದ ಒಳಗಾಗಿ ಮನೆಗೆ ತಲುಪಿಸಲಾಗುವುದು.
ರೂಟ್ ಗಳು ಈ ಕೆಳಗಿನಂತಿವೆ.
ಸೋಮವಾರ , ಬುಧವಾರ, ಶುಕ್ರವಾರ :
ರೂಟ್ 1 = ಪರ್ಲಡ್ಕ- ಮಚ್ಚಿಮಲೆ- ದೇವಸ್ಯ- ಬಲ್ನಾಡು- ಬಪ್ಪಳಿಗೆ.
ರೂಟ್ 2 = ಮುರ- ಕಬಕ- ಕೆದಿಲ- ಮಿತ್ತೂರು- ಅಳಕೆಮಜಲು.
ರೂಟ್ 3 = ಮೊಟ್ಟೆತ್ತಡ್ಕ- ಕುರಿಯ- ಸಂಪ್ಯ- ಸಂಟ್ಯಾರ್.
ಮಂಗಳವಾರ, ಗುರುವಾರ, ಶನಿವಾರ:
ರೂಟ್ 1 : ದರ್ಬೆ- ಕೂರ್ನಡ್ಕ- ಮರೀಲ್- ಕೆಮ್ಮಿಂಜೆ- ಪುರುಷರಕಟ್ಟೆ- ನರಿಮೊಗರು.
ರೂಟ್ 2: ಎಪಿಎಂಸಿ ರೋಡ್- ಸಾಲ್ಮರ- ಜಿಡೆಕಲ್ಲು- ಕೆಮ್ಮಾಯಿ- ಬೆದ್ರಾಳ.
ರೂಟ್ 3: ಕೆಮ್ಮಾಯಿ- ಬನ್ನೂರು- ಸೇಡಿಯಾಪು- ಹಾರಾಡಿ.
ಸಾಗಾಟದ ವೆಚ್ಚವನ್ನು ಮುಳಿಯ ಜ್ಯುವೆಲ್ಸ್ ಅವರು ಭರಿಸಲಿದ್ದಾರೆ.
ಸಾರ್ವಜನಿಕರು ತಮ್ಮ ಮನೆಯ ಸಮೀಪದ ರಸ್ತೆಗೆ ಬಂದು ಡೆಲಿವರಿ ಪಡೆದುಕೊಳ್ಳಬಹುದು.
ಆರ್ಡರ್ ಗೆ ಕರೆ ಮಾಡುವ ಸಮಯ ಪ್ರತೀ ದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ (5 ಲೈನ್)
ಮಧ್ಯಾಹ್ನ 12 ರಿಂದ ಸಂಜೆ 6 ರವರೆಗೆ (1 ಲೈನ್ )
Comments are closed.