ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷರಿಂದ ಪಡಿತರ ಚೀಟಿ ರಹಿತ ಮನೆಗೆ ಅಕ್ಕಿ

ಪುತ್ತೂರು: ಕೊರೊನಾ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಜನತೆಗೂ ಬಿಸಿ ತಟ್ಟಿದೆ.

ಪಡಿತರ ಚೀಟಿ ಇರುವವರಿಗೆ ಸರಕಾರದ ಆಹಾರ ಇಲಾಖೆಯ ಮೂಲಕ ರೇಷನ್ ನೀಡಲಾಗಿದೆ. ಆದರೆ ಪಡಿತರ ಚೀಟಿ ರಹಿತರಿಗೆ ಏನೂ ಸಿಕ್ಕಿಲ್ಲ‌.

ಈ ನಿಟ್ಟಿನಲ್ಲಿ ಕೊಳ್ತಿಗೆ ಗ್ರಾಮದ ಮಣಿಕ್ಕರದಲ್ಲಿ ಪಡಿತರ ಚೀಟಿ ರಹಿತ ಕುಟುಂಬಕ್ಕೆ ಕೊಳ್ತಿಗೆ ಗ್ರಾ.ಪಂ.ಅಧ್ಯಕ್ಷೆ ಗಿರಿಜಾ ಧನಂಜಯ ಅವರು ವೈಯಕ್ತಿಕವಾಗಿ ಅಕ್ಕಿ ನೀಡಿ ಸಹಕರಿಸಿದರು.

ಪಡಿತರ ಚೀಟಿ ರಹಿತರ ಗುರುತಿಸುವಿಕೆಗೆ ಇದು ಸಕಾಲ.

ಮುಂದಿನ‌ ದಿನಗಳಲ್ಲಿ ಪಡಿತರ ಚೀಟಿ ರಹಿತರಿಗೆ ಪಡಿತರ ಚೀಟಿ ಮಾಡಿಸಿಕೊಳ್ಳುವ ಕಾರ್ಯಗಳನ್ನು ಮಾಡಬೇಕಿದೆ.

Comments are closed.