ಪುತ್ತೂರು | ಬ್ರಹ್ಮರಥೋತ್ಸವದ ಬದಲು ಪಂಚಾಕ್ಷರಿ ಪಠಣಕ್ಕೆ ಮನವಿ

Share the Article

ಪುತ್ತೂರು: ಪುತ್ತೂರ ಸೀಮೆಯ ಒಡೆಯ ಶ್ರೀ ಮಹಾಲಿಂಗೇಶ್ವರನ ಬ್ರಹ್ಮರಥೋತ್ಸವವು ತುಳುಪಂಚಾಂಗ ನಲ್ಕುರಿಯಂತೆ ಎ.17 ರಂದು ಈ ಬಾರಿ ನಡೆಯುವುದಿಲ್ಲ.

ಈ ನಿಟ್ಟಿನಲ್ಲಿ ಸೀಮೆಯ ಭಕ್ತರು ಪಂಚಾಕ್ಷರಿ ಪಠಣವನ್ನು ಮಾಡುವಂತೆ ದೇವಳದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

ಏ.17ರಂದು ಸಂಜೆ ಗಂಟೆ 7-30ಕ್ಕೆ ಶ್ರೀ ದೇವರ ಭಕ್ತರೆಲ್ಲರು ತಮ್ಮ ತಮ್ಮ ಮನೆಯಲ್ಲೇ “ಓಂ ನಮಃ ಶಿವಾಯ”ಪಂಚಾಕ್ಷರಿ ಪಠಣ ಮಾಡುವ ಮೂಲಕ ಶ್ರೀ ದೇವರನ್ನು ಸ್ಮರಿಸುವ ಮತ್ತು ಈಗ ಬಂದಿರುವ ಕಷ್ಟಕಾರ್ಪಣ್ಯಗಳನ್ನು ದೂರಿಕರಿಸುವಂತೆ ಪ್ರಾರ್ಥಿಸಲು ದೇವಳದ ಆಡಳಿತಾಧಿಕಾರಿ ಸಿ.ಲೋಕೇಶ್ ಮತ್ತು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ವಿನಂತಿಸಿದ್ದಾರೆ.

Comments are closed.