ಲಾಕ್ ಡೌನ್ 2.0 ರ ಮಾರ್ಗಸೂಚಿ ಪ್ರಕಟ

ನವದೆಹಲಿ : ಕೇಂದ್ರ ಸರಕಾರವು ಮಾರಕ ಕೋರೋನಾ ವೈರಸ್ ನಿಯಂತ್ರಣಕ್ಕೆ ಮುಂದುವರಿಸಿದ ಲಾಕ್ ಡೌನ್ 2 ರ ಮಾರ್ಗಸೂಚಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.
ಈಗಾಗಲೇ ಮೇ 3 ರವರೆಗೆ ಲಾಕ್ ಡೌನ್ ವಿಸ್ತರಿಸಲಾಗಿದ್ದು ಈ ವೇಳೆ, ಅನುಸರಿಸಬೇಕಾದ ಕ್ರಮಗಳು ಹಾಗೂ ಕೆಲವು ಅಗತ್ಯ ಸೇವೆಗೆ ವಿನಾಯಿತಿ ನೀಡಲಾಗಿದ್ದು, ಈ ಕುರಿತಾದ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಪಟ್ಟಿ ಮಾಡಿದೆ. ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ವಿವಿಧ ಇಲಾಖೆಗಳು ಲಾಕ್ ಡೌನ್ 2.0 ವೇಳೆ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿಯನ್ನು ಸ್ಪಷ್ಟಪಡಿಸಲಾಗಿದೆ.

 • ದಿನಸಿ, ಔಷಧಿ, ಹಣ್ಣು, ಮೀನು ಮಾಂಸ ಮಾರಾಟಕ್ಕೆ ತರಕಾರಿ, ರಸಗೊಬ್ಬರ, ಬೀಜ, ಕೀಟ ನಾಶಗಳ ಮಾರಾಟಕ್ಕೆ ಶುದ್ಧ ವಿನಾಯಿತಿ ನೀಡಲಾಗಿದೆ.
 • ವಿಮಾನಯಾನ, ರೈಲು ಸಂಚಾರ, ಸಾರಿಗೆ ಸಂಚಾರಕ್ಕೆ ಅವಕಾಶವಿಲ್ಲ.  ವಿಮಾನ ಹಾರಾಟಕ್ಕೆ ಅನುಮತಿ ಇಲ್ಲ.
 • ಪ್ರಿಂಟ್, ಟೆಲಿಕಾಮ್, ಮೀಡಿಯಾ, ಇಂಟರ್ ನೆಟ್ ಸೇವೆ, ಇ-ಕಾಮರ್ಸ್, ಕೇಬಲ್ ಆಪರೇಟರ್ ಸಿಬ್ಬಂದಿಗೂ ವಿನಾಯಿತಿ ನೀಡಲಾಗಿದೆ.
 • ವಿಮೆ ಕಂಪನಿಗಳು, ಬ್ಯಾಂಕ್, ಎಟಿಎಂ ಸೇವೆಗೂ ವಿನಾಯಿತಿ ನೀಡಲಾಗಿದೆ.
 • ಬ್ಯಾಂಕ್ ಸಿಬ್ಬಂದಿ ಎಂದಿನಂತೆ ಕಾರ್ಯ ನಿರ್ವಹಿಸಬಹುದಾಗಿದೆ.
 • ಪೆಟ್ರೋಲ್ ಬಂಕ್, ವಿದ್ಯುತ್ ನಿಗಮ, ಗ್ಯಾಸ್ ಎಜೆನ್ಸಿಗಳಿಗೂ ವಿನಾಯಿತಿ ನೀಡಲಾಗಿದೆ.
 • ಕೋಲ್ಡ್ ಸ್ಟೋರೇಜ್, ಎಪಿಎಂಸಿ ಗಳಿಗೂ ಅವಕಾಶ
 • ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳು, ಆತಿಥ್ಯ ಸೇವೆಗಳು, ಸಿನೆಮಾ ಹಾಲ್‌ಗಳು ಮತ್ತು ಶಾಪಿಂಗ್ ಸಂಕೀರ್ಣಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿರುತ್ತವೆ.
 • ಎಲ್ಲ ಶೈಕ್ಷಣಿಕ ಸಂಸ್ತೆಗಳು ಬಂದ್, ಟ್ರೈನಿಂಗ್, ಸಂಶೋಧನೆ, ಕೋಚಿಂಗ್ ಸಂಸ್ಥೆಗಳಿಗೆ ನಿರ್ಬಂಧ
 • ಕಚೇರಿಗಳಲ್ಲಿ ಸ್ಯಾನಿಟೈಸರ್ ಗಳು, ಪ್ರವೇಶ ನಿಯಂತ್ರಣವನ್ನು ದೃಢಪಡಿಸುವುದು, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸುವುದು ಕಡ್ಡಾಯ
 • ವಿಚಾರ ಸಂಕಿರಣ, ಧಾರ್ಮಿಕ ಸಭೆ, ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ ಚಟುವಟಿಕೆಗಳಿಗೆ ನಿರ್ಬಂಧ
 • ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆಗೆ 20 ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ
 • ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ
 • ಕೆಲಸದ ಸ್ಥಳಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು ನಿಷಿದ್ಧ ಅಲ್ಲದೇ, ಇಂತಹ ಚಟುವಟಿಕೆಗಳಲ್ಲಿ ತೊಡಗಿದವರಿಗೆ ದಂಡ ವಿಧಿಸುವುದಾಗಿ ತಿಳಿಸಲಾಗಿದೆ.
 • ಕಟ್ಟಡ ಮತ್ತು ಕೈಗಾರಿಕಾ ಯೋಜನೆಗಳು; ಜಲ ಸಂರಕ್ಷಣೆ ಮತ್ತು ನೀರಾವರಿ ಯೋಜನೆಗಳಲ್ಲಿ ನರೇಗಾ ಅಡಿ ಕೆಲಸ, ಗ್ರಾಮೀಣ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಮಾಡಲು ಅನುಮತಿ
 • ಐಟಿ ಹಾರ್ಡ್‌ವೇರ್‌ ಹಾಗೂ ಅತ್ಯಗತ್ಯ ವಸ್ತುಗಳ ತಯಾರಿಕೆ, ಪ್ಯಾಕೇಜಿಂಗ್‌ ಕಾರ್ಯಗಳು ಇತ್ಯಾದಿ ಪುನರಾರಂಭಕ್ಕೆ ಅವಕಾಶ
 • ವಿದೇಶಿ ಕ್ವಾರಂಟೈನ್ ಗಳ ಬಿಡುಗಡೆ ; ಫೆ.15 ರ ನಂತರ ಭಾರತಕ್ಕೆ ಆಗಮಿಸಿದ ಕ್ಯಾರೆಂಟೈನ್ಡ್ ವ್ಯಕ್ತಿಗಳ ಬಿಡುಗಡೆಗೆ ಅವಕಾಶ
 • ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿರುವ ಪ್ರದೇಶಗಳಿಗೆ ಹೊರಗಿನಿಂದ ಯಾರ ಪ್ರವೇಶಕ್ಕೂ ಅನುಮತಿ ಇಲ್ಲ. ಈ ಪ್ರದೇಶದಲ್ಲಿ ಕಾನೂನು ಕಠಿಣವಾಗಿರಲಿದ್ದು, ಮಾಲಿನ್ಯಕ್ಕೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.

Comments are closed.