ಸುಳ್ಯ|ಅಸಂಘಟಿತ ಕೂಲಿಕಾರ್ಮಿಕರ ಭೋಜನ ವ್ಯವಸ್ಥೆ ತಯಾರಿಸುವ ಕೇಂದ್ರಕ್ಕೆ ಡಿವೈಎಸ್ಪಿ ದಿನಕರ ಶೆಟ್ಟಿ ಭೇಟಿ


ಸುಳ್ಯ : ಎಂಬಿ ಫೌಂಡೇಶನ್ ಮತ್ತು ಕಟ್ಟಡ ಕಾರ್ಮಿಕರ ಸಂಘ ಸಿಐಟಿಯು ಹಾಗೂ ದಾನಿಗಳ ಸಹಕಾರ ದಲ್ಲಿ ನಡೆಯುತ್ತಿರುವ ಅಸಂಘಟಿತ ಕೂಲಿಕಾರ್ಮಿಕರ ಭೋಜನ ವ್ಯವಸ್ಥೆ ಕಳೆದ 16 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದು ಜನ ಮನ್ನಣೆಗೆ ಪಾತ್ರವಾಗಿದೆ.
ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಈ ಒಂದು ಭೋಜನದ ವ್ಯವಸ್ಥೆಯೂ ತಯಾರಿಸುತ್ತಿದ್ದು ಇದರ ವೀಕ್ಷಣೆಗೆ ಎಂದು ಡಿವೈಎಸ್ಪಿ ದಿನಕರ ಶೆಟ್ಟಿ ರವರು ಭೇಟಿ ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ನಂತರ ಮಾತನಾಡಿದ ಅವರು ಈ ಒಂದು ಕಾರ್ಯಕ್ರಮವು ಇಡೀ ಜಿಲ್ಲೆಗೆ ಮಾದರಿಯಾಗಿದ್ದು ಬಡವರ ಹಸಿವು ನೀಗಿಸುವಲ್ಲಿ ಈ ಒಂದು ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.


ನಮ್ಮಿಂದ ಏನಾದರೂ ಸೌಲಭ್ಯಗಳು ಬೇಕಾದಲ್ಲಿ ನಿಸ್ಸಂಕೋಚವಾಗಿ ಕೇಳಿಕೊಳ್ಳಿ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಈ ವೇಳೆಯಲ್ಲಿ ಸುಳ್ಯ ವೃತ್ತ ನಿರೀಕ್ಷಕ ನವೀನಚಂದ್ರ ಜೋಗಿ, ಎಸ್ ಐ. ಹರೀಶ್ ಎಂ ಆರ್ ಉಪಸ್ಥಿತರಿದ್ದರು.

ವರದಿ : ಹಸೈನಾರ್ ಜಯನಗರ

Comments are closed.