ಪೆರುವೋಡಿ | ಊರ ದೇವಳದ ಅರ್ಚಕರಿಗೆ ನೆರವಾದ ಜನತೆ

ಸುಳ್ಯ: ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ದೇವಸ್ಥಾನಗಳಲ್ಲಿ ಅರ್ಚಕರು ಮಾತ್ರ ತೆರಳಿ ಪೂಜೆ ಸಲ್ಲಿಸುವಂತಾಗಿದೆ.ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿರುವುದರಿಂದ ಅತ್ಯಲ್ಪ ವೇತನಕ್ಕೆ ದೇವರ ಕಾರ್ಯವೆಂದು ಪೂಜೆ ಸಲ್ಲಿಸುವ ಅರ್ಚಕ ವರ್ಗದವರಿಗೂ ಜೀವನ ಕಷ್ಟಕರವಾಗಿದೆ.

ಈ ನಿಟ್ಟಿನಲ್ಲಿ ಪೆರುವಾಜೆ ಗ್ರಾಮದ ಪೆರುವೊಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರಾದ ಸುರೇಶ್ ಉಪಾದ್ಯಾಯ ಅವರಿಗೆ ದೇವಸ್ಥಾನದ ಭಕ್ತರು ಸೇರಿಕೊಂಡು ದಿನಬಳಕೆ ಸಾಮಗ್ರಿಗಳು ಹಾಗೂ ನಗದು ನೀಡುವ ಮೂಲಕ ಸಂಕಷ್ಟದ ಸಮಯದಲ್ಲಿ ನೆರವು ನೀಡಲಾಯಿತು.ಈ ಕಾರ್ಯ ಬೇರೆ ಕಡೆಗಳಲ್ಲಿ ನಡೆಯಲಿ ಎಂಬ ಉದ್ದೇಶದಿಂದ ಈ ವರದಿ .

ಈ ಸಂದರ್ಭದಲ್ಲಿ ಕುಂಬ್ರ ದಯಾಕರ ಆಳ್ವ, ಬಾಲಚಂದ್ರ ಭಟ್ ಕೊಂಡೆಪ್ಪಾಡಿ, ಸುಧಾಕರ್ ರೈ ಕುಂಜಾಡಿ,ಕುಶಾಲಪ್ಪ ಗೌಡ ಅಡ್ಯತಕಂಡ,ದಯಾನಂದ ಗೌಡ ಕೆನೆಮಾರ್, ಹಾಗೂ ಯುವಸೇನೆಯ ಕಾರ್ಯಕರ್ತರಾದ ಸಚಿನ್ ರೈ ಪೂವಾಜೆ, ನವೀನ್ ರೈ ಬರೇಮೇಲು, ಸಂದೀಪ್ ಕುಂಜಾಡಿ, ಪ್ರಶಾಂತ್ ಬೊಮ್ಮೆಮಾರ್, ಅಶೋಕ್ ರೈ ಪೂವಾಜೆ, ಈಶ್ವರ ರೈ ಪೂವಾಜೆ, ಶರತ್ ಮತ್ತಿತರರು ಉಪಸ್ಥಿತರಿದ್ದರು .

Comments are closed.