ಕೊರೊನಾ ಜಾಗೃತಿ 4.0 | ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು | ಮೇ.3 ರವರೆಗೆ ಕಠಿಣ ನಿಯಮಗಳ ಲಾಕ್ ಡೌನ್ ವಿಸ್ತರಣೆ !

ಸಪ್ತ ಸೂತ್ರಗಳು, ಸಾರಾಂಶಗಳು


Ad Widget

Ad Widget

Ad Widget

Ad Widget
Ad Widget

Ad Widget
 • ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಮೇ.3 ರವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಲಾಗುವುದು
 • ವಿಸ್ತರಣೆ ಮಾಡಬೇಕಾದದ್ದು ಅನಿವಾರ್ಯವಾಗಿದೆ
 • ಅಂದರೆ ಮತ್ತೆ 19 ದಿನಗಳ ಲಾಕ್ಡೌನ್ ಮುಂದುವರಿಕೆ.
 • ಹಾಟ್‌ಸ್ಪಾಟ್ ಗಳಲ್ಲಿ ಹೆಚ್ಚಿನ ಸುರಕ್ಷತೆ, ಎಚ್ಚರ. ಅಲ್ಲಿ ಹೆಚ್ಚಿನ ಕಠಿಣ ಲಾಕ್ಡೌನ್ ಅನಿವಾರ್ಯ.
 • ಎ.20 ರವರೆಗೆ ಪೊಲೀಸರ ಹದ್ದಿನ ಕಣ್ಗಾವಲು.
 • ಎ.20 ರವರೆಗೆ ಕೆಲವು ಭಾಗಗಳಲ್ಲಿ ಕೋರೋಣ ಸೋಂಕು ಮರುಕಳಿಸದೇ ಇದ್ದರೆ ಅಲ್ಲಿ ಕೆಲಮಟ್ಟಿನ ಸಡಿಲಿಕೆ ಮಾಡಲಾಗುವುದು-ಮರ ನಿರ್ಧಾರ
 • ನಾಳೆ ಕೊರೊನಾ ಗೈಡ್‌ಲೈನ್ ಬಿಡುಗಡೆ. ಅದರಲ್ಲಿ ಸವಿಸ್ತಾರವಾದ ಮಾರ್ಗಸೂಚಿ ಸೂತ್ರಗಳು ಇರಲಿವೆ
 • ನಮ್ಮಲ್ಲಿ ಔಷಧದಿಂದ ಹಿಡಿದು ಆಹಾರದವರೆಗೆ ಕೊರತೆ ಇಲ್ಲ.
 • ಲಾಕ್ ಡೌನ್ ನಿಂದ ರೈತರಿಗೆ ವಿನಾಯತಿ
 • ಸಾಮಾಜಿಕ ಅಂತರ ಮೆಂಟೇನ್ ಮಾಡಿಕೊಳ್ಳಿ
 • ಮನೆಯಲ್ಲಿಯೆ ತಯಾರಿಸಿದ ಮಾಸ್ಕ ಹಾಕಿಕೊಳ್ಳಿ
 • ಆರೋಗ್ಯ ಕಾರ್ಯಕರ್ತರ ಮೇಲೆ ಗೌರವವಿರಲಿ
 • ಹಿರಿಯ ನಾಗರಿಕರ ಮೇಲೆ ಹೆಚ್ಚಿನ ಕಾಳಜಿ ಇರಲಿ
 • ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಬೇಡಿ
 • ಬಡವರು, ನಿರ್ಗತಿಕರಿಗೆ ಸಹಾಯಮಾಡಿ.
 • ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುಷ್ ಮಾರ್ಗಸೂಚಿ ಪಾಲಿಸಿ
 • ಯುವ ವಿಜ್ಞಾನಿಗಳಿಗೆ ಲಸಿಕೆ ಕಂಡು ಹಿಡಿಯುವಂತೆ ಕರೆ
 • ಆರೋಗ್ಯ ಸೇತು ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಮೋದಿ ಭಾಷಣ


Ad Widget

ಅವರ ವಿರುದ್ಧ ನಮ್ಮ ಹೋರಾಟ ಒಳ್ಳೆಯ ರೀತಿಯಲ್ಲಿ ಮುಂದುವರಿಯುತ್ತಿದೆ. ನಾವು ಕೋರೋಣ ಹೋರಾಟದಲ್ಲಿ ಮೌಂಚುಣಿಯಲ್ಲಿದ್ದೇವೆ. ನೀವು ಕಷ್ಟ ಇದ್ದರೂ ಸರಿ, ದೇಶವನ್ನು ಉಳಿಸಿದ್ದೀರಿ. ಉಣ್ಣಲು ತಿನ್ನಲು ಕಸ್ತವಿದ್ದರೂ, ಮನೆಯಿಂದ ದೂರ ಇದ್ದರೂ ನೀವು ಲಾಕ್ ಡೌನ್ ಪಾಲಿಸಿ ಕರ್ತವ್ಯ ಮೆರೆಯುತ್ತಿದ್ದಿರಿ.

ಅಂಬೇಡ್ಕರ್ ನಮಗೆ ಆದರ್ಶ. ಪ್ರೇರಣೆ. ನಾವು ಅನೇಕ ಉತ್ಸವಗಳ ಜತೆಗೆ ನಮ್ಮ ಜೀವನವನ್ನು ಆಚರಿಸುವವರು. ಆದರೂ ನಾವು ಎಲ್ಲವನ್ನೂ ಬದಿಗೆ ಇಟ್ಟು ಅವನ್ನು ಮನೆಯಲ್ಲೇ ಆಚರಿಸಿ ಕೋರೋನಾ ವಿರುದ್ಧದ ಹೋರಾಟದಲ್ಲಿ ಮನಸಾರೆ ಭಾಗವಹಿಸಿದೇವು.
ಒಂದೊಮ್ಮೆ ಭಾರತದಲ್ಲಿ ಒಂದೇ ಒಂದು ಕೋರೋನಾ ಕೇಸು ಇರಲಿಲ್ಲ. ಈಗ ಲಾಕ್ ಡೌನ್ ನ ನಡುವೆಯೂ ಕೋರೋನಾ ಹಬ್ಬುತ್ತಿದೆ. ಬಲಾಢ್ಯ್ಯ ದೇಶಗಳು ಕೂಡ ಇದರ ಹೊಡೆತಕ್ಕೆೆ ನಲುಗಿ ಹೋಗಿವೆ. ಆ ದೇಶಗಳಿಗೆ ಹೋಲಿಸಿದರೆ ಭಾರತ ಸರಿಯಾಗಿ ಬಲಿಷ್ಠವಾಗಿ ಹೋರಾಡುತ್ತಿದೆ. ನಾವು ತೆಗೆದುಕೊಂಡ ಸೋಶಿಯಲ್ ಡಿಸ್ಟೆನ್ಸ್ ಮತ್ತು ಲಾಕ್ ಡೌನ್ ನ ಲಾಭ ದೇಶಕ್ಕೆ ದೊರೆತಿದೆ. ಆದರೆ ಆರ್ಥಿಕ ದೃಷ್ಟಿಯಿಂದ ನಮಗೆ ದೊಡ್ಡ ನಷ್ಟ ಆಗಿದೆ.ಆದರೆ ಜನರ ಪ್ರಾಣದ ಮುಂದೆ ಅದು ಲೆಕ್ಕಕ್ಕಿಲ್ಲ.
ಎಲ್ಲಾ ರಾಜ್ಯಗಳು, ಸ್ಥಳೀಯ ಆಡಳಿತ ರಾತ್ರಿ ಹಗಲು ದುಡಿಯುತ್ತಿದೆ.
ಆದರೂ ಕೋರೋಣ ಎಂಬ ಭೀಕರ ರೋಗ ಮುಂದುವರಿಯುತ್ತಿದೆ. ಒಂದೇ ಒಂದು ಸಾವು ಆಗುವವರೆಗೆ ಈ ಹೋರಾಟ ನಡೆಯಬೇಕು.

ಒಟ್ಟಾರೆಯಾಗಿ ಯಾವುದೇ ರಿಯಾಯಿತಿಗಳು ಇಲ್ಲದೆ ಲಾಕ್ಡೌನ್ ಮತ್ತೆ 19 ದಿನಗಳ ಕಾಲ ಅಂದರೆ ಮೇ 3ರವರೆಗೆ ವಿಸ್ತರಣೆಯಾಗಿದೆ. ಏಪ್ರಿಲ್ ಇಪ್ಪತ್ತರ ತನಕ ಕಟ್ಟುನಿಟ್ಟಿನ ಆನಂತರ ಪರಿಸ್ಥಿತಿ ನೋಡಿ ಕೆಲವು ಪ್ರದೇಶಗಳಲ್ಲಿ ಸಡಿಲಿಸುವ ನಿರೀಕ್ಷೆ ಇದೆ ಇದೆ. ಹೋಟೆಲ್ಲು, ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪುಗಳು ಯಾವುದಕ್ಕೂ ವಿನಾಯಿತಿ ಇಲ್ಲ.

error: Content is protected !!
Scroll to Top
%d bloggers like this: