ಬೇಸಿಗೆ ರಜೆ ಶಿಕ್ಷಕರಿಗೆ ಸಜೆ | ಶಿಕ್ಷಕರಿಗೆ ಅವರ ಸ್ವಂತ ಊರುಗಳಿಗೆ ತೆರಳಲು ವ್ಯವಸ್ಥೆ ಮಾಡಿಕೊಡಲು ಶಿಕ್ಷಕರ ಅಳಲು

ಎಪ್ರಿಲ್ 12 ರಿಂದ ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆಯಾದರೂ ಕೇಂದ್ರ ಸ್ಥಾನದಲ್ಲಿ ಕರ್ತವ್ಯ

ನಿರ್ವಹಿಸುತ್ತಿದ್ದ ಶಿಕ್ಷಕರು ತಮ್ಮ ಊರುಗಳಿಗೆ ತೆರಳಲು ಲಾಕ್‍ಡೌನ್ ಸಮಸ್ಯೆ ಎದುರಾಗಿದೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಜಿಲ್ಲೆಯ ಬಹುತೇಕ ಶಿಕ್ಷಕರು ವರ್ಷಕ್ಕೊಮ್ಮೆ ಊರಿಗೆ ಹೋಗುತ್ತಿದ್ದುದರಿಂದ ಅಂಥಹ ಶಿಕ್ಷಕರಿಗೆ ತಮ್ಮ ಕುಟುಂಬದಿಂದ ದೂರವಿರುವ ಪರಿಸ್ಥಿತಿ ಎದುರಾಗಿದೆ.

ಹೀಗಾಗಿ ಊರಿಗೆ ತೆರಳಲು ವ್ಯವಸ್ಥೆ ಕಲ್ಪಿಸಿ ಎಂದು ಸರಕಾರಕ್ಕೆ ಶಿಕ್ಷಕರ ಸಂಘಗಳು ಮನವಿಯನ್ನು ಸಲ್ಲಿಸಿವೆ. ಕೊರೊನಾ ವೈರಸ್ ಸೊಂಕು ತಡೆಗಟ್ಟುವಿಕೆಗೆ ಮುಂಜಾಗ್ರತ ಕ್ರಮವಾಗಿ ಕರ್ನಾಟಕದಲ್ಲಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಯವರಿಗೆ ರೆಜೆಯನ್ನು ಘೋಷಿಸಿ, ಮನೆಯಿಂದಲೆ ಶಾಲೆಯ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ ಕೆಲಸ ಮಾರ್ಚ್ ಅಂತ್ಯವರೆಗೆ ನಿರ್ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿತ್ತು.

ಬಳಿಕ ಎಲ್ಲಾ ಶಾಲೆಗಳಿಗೆ ಎಪ್ರಿಲ್ 11ರವರೆಗೆ ರಜೆಯನ್ನು ವಿಸ್ತರಿಸಿ, ಎಪ್ರಿಲ್ 12 ರಿಂದ ಎಲ್ಲಾ ಶಾಲೆಗಳಿಗೆ ಬೇಸಿಗೆ ರಜೆಯನ್ನು ಘೋಷಿಸಲಾಯಿತು.

ಈ ವೇಳಗಾಗಲೇ ಲಕಾಡೌನ್ ವಿಧಿಸಿದ್ದರಿಂದ ಕೇಂದ್ರ ಸ್ಥಾನದಲ್ಲಿ ಉಳಿಯುವಂತಾಗಿದೆ. ಸೂಚನೆಯಲ್ಲಿ ಏನಿತ್ತು ಈ ರಜೆ ಅವಧಿಯಲ್ಲಿ ಶಿಕ್ಷಕರನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ಎಲ್ಲಾ ಶಿಕ್ಷಕರ ಮತ್ತು ಭೋದಕೇತರ ಸಿಬ್ಬಂದಿಯವರ ಮೊಬೈಲ್ ಮತ್ತು ಮನೆ ವಿಳಾಸದ ವಿವರಗಳನ್ನು ಶಾಲಾ ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡುವಂತೆ ಇಲಾಖೆಯೂ ಸೂಚಿಸಿ, ಈ ರಜೆ ಅವಧಿಯಲ್ಲಿ ಎಲ್ಲಾ ಶಿಕ್ಷಕರು ಮತ್ತು ಭೋದಕೇತರ ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲ, ಇವರುಗಳ ಸೇವೆ ಅಗತ್ಯವಿದೆ ಎಂದು ಕಂಡು ಬಂದಲ್ಲಿ ಇವರು ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಎಂಬ ನಿಯಮವನ್ನು ವಿಧಿಸಿತ್ತು.

ಇದುವೇ ಶಿಕ್ಷಕರಿಗೆ ನುಂಗಲಾರದ ತುತ್ತಾಗಿದೆ. ಈ ನಿಯಮದಿಂದ ಶಿಕ್ಷಕರು ತಮ್ಮ ಕುಟುಂಬದಿಂದ ದೂರಯುಳಿವಂತಾಗಿದೆ. ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ಶಿಕ್ಷಕರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಬಹುತೇಕ ಶಿಕ್ಷಕರು ವರ್ಷಕ್ಕೊಮ್ಮೆ ಊರಿಗೆ ಹೋಗುತ್ತಿದ್ದುದರಿಂದ ಅಂಥಹ ಶಿಕ್ಷಕರಿಗೆ ತಮ್ಮ ಕುಟುಂಬದಿಂದ ದೂರವಿರುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದಿಗ್ಧ ಸನ್ನೇವೇಶದಲ್ಲಿ ಮನೆಯಲ್ಲಿರುತ್ತ್ತಿದ್ದರೆ ತಮ್ಮ ಕುಟುಂಬಕ್ಕೆ ದೈರ್ಯ ತುಂಬುವ, ದಿನನಿತ್ಯದ ಸಾಮಾಗ್ರಿಗಳನ್ನು ತಂದುಕೊಡುವ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದೇವು ಎನ್ನುತ್ತಾರೆ ಶಿಕ್ಷಕರೋರ್ವರು.

ಶಿಕ್ಷಕರಿಗೆ ಈಗ ಬೇಸಿಗೆ ರಜೆ ಪ್ರಾರಂಭವಾಗಿರುವುದರಿಂದ ಹೊರ ಜಿಲ್ಲೆಗೆ ತೆರಳಬೇಕಾದ ಶಿಕ್ಷಕರಿಗೆ ಒಂದು ಅವಕಾಶ ನೀಡುವಂತೆ ಕೆಲವು ಶಿಕ್ಷಕ ಸಂಘಟನೆಗಳು ಶಿಕ್ಷಣ ಸಚಿವರನ್ನು ಮನವಿ ಮಾಡಿಕೊಂಡಿವೆ. ಇದಕ್ಕೆ ಸರಕಾರ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನ ಶಿಕ್ಷಕ ವರ್ಗದವರು ಕಾದು ನೋಡುತ್ತಿದ್ದಾರೆ.

ಈಗ ಬೇಸಿಗೆ ರಜೆ ಘೋಷಣೆಯಾಗಿರುವುದರಿಂದ, ಇಲಾಖೆಯೂ ಸೂಚಿಸಿದ ಕರ್ತವ್ಯವನ್ನು ಮನೆಯಿಂದಲ್ಲೆ ನಿರ್ವಹಿಸಲು ಬದ್ಧರಾಗಿದ್ದೇವೆ. ನಮ್ಮ ಸ್ವಂತ ಜಿಲ್ಲೆಗೆ ತೆರಳುವ ಮೊದಲು ಸರಕಾರಿ ಆಸ್ವತ್ರೆಗಳಲ್ಲಿ ತಪಾಸಣೆ ಮಾಡಿಸಿ ಪ್ರಮಾಣ ಪತ್ರ ಪಡೆದುಕೊಂಡು, ಮುಖ್ಯ ಶಿಕ್ಷಕರ ಅನುಮತಿ ಪತ್ರದೊಂದಿಗೆ ನಮ್ಮ ಜಿಲ್ಲೆಗಳಿಗೆ ತೆರಳಲು ಒಂದು ಅವಕಾಶವನ್ನು ಸರಕಾರ ಮಾಡಿಕೊಡಬೇಕು. – -ಹೆಸರು ಹೇಳಲು ಇಚ್ಚಿಸದ ಶಿಕ್ಷಕ

ಬೇಸಿಗೆ ರಜೆ ಆರಂಭವಾಗಿದ್ದರೂ ಶಿಕ್ಷಕರು ಕೇಂದ್ರ ಸ್ಥಾನದಿಂದ ಲಾಕ್‍ಡೌನ್‍ನಿಂದಾಗಿ ತನ್ನೂರಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಈ ಸಮಸ್ಯೆ ಪರಿಹರಿಸುವಂತೆ ಈಗಾಗಲೇ ರಾಜ್ಯ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಿರುವುದರಿಂದ ಮತ್ತು ಲಾಕ್‍ಡೌನ್ ಕಾನೂನು ಪಾಲನೆ ಎಲ್ಲಾ ವರ್ಗವಕ್ಕೂ ಏಕರೂಪವಾಗಿದೆ. ಹಾಗಾಗಿ ತಕ್ಷಣಕ್ಕೆ ಭರವಸೆ ನೀಡಲು ಅಸಾಧ್ಯ. ಶಿಕ್ಷಕರ ಸಮಸ್ಯೆ ಬಗ್ಗೆ ಅರಿವಿದೆ. ಈ ಬಗ್ಗೆ ವ್ಯವಸ್ಥೆ ಸರಿಪಡಿಸಿಕೊಂಡು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎನ್ನುವ ಭರವಸೆ ನೀಡಿದ್ದಾರೆ.

– ಹೆಚ್.ಕೆ ಮಂಜುನಾಥ್. ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಪ್ರೌಡಶಾಲಾ ಸಹ ಶಿಕ್ಷಕರ ಸಂಘ

Comments are closed.