ಬಿಸಿಲಿನ ತಾಪ ಹೆಚ್ಚಾದಂತೆ ನಗರದ ಕೆಲವು ವಾರ್ಡುಗಳಲ್ಲಿ ನೀರಿಗಾಗಿ ಹಾಹಾಕಾರ

ಹಸೈನಾರ್, ಜಯನಗರ

ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈಗಾಗಲೇ ಬಿಸಿಲಿನ ತಾಪಮಾನವು ದಾಖಲೆಯ ಮಟ್ಟವನ್ನು ಮೀರಿದ್ದು ನಗರದ ಹಲವು ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಹಾಹಾಕಾರವೂ ಎದ್ದು ಕಾಣುತ್ತಿದೆ.

ನಗರದ ಬೋರುಗುಡ್ಡೆ ನಾವೂರು ವಾರ್ಡ್ ಗಳಲ್ಲಿ ಕೆಲವು ದಿನಗಳಿಂದ ನೀರಿಗೆ ಸಮಸ್ಯೆ ಉಂಟಾಗಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ನಗರ ಪಂಚಾಯತ್ ಕಚೇರಿಗೆ ಹೋಗಿ ಹೇಳಿಕೊಳ್ಳಲು ಸಾಧ್ಯವಿಲ್ಲದ ಕಾರಣ ಸ್ಥಳೀಯ ಮುಖಂಡರುಗಳಲ್ಲಿ ಅಹವಾಲುಗಳನ್ನು ಹೇಳಿಕೊಂಡಿರುತ್ತಾರೆ.

ಸ್ಥಳೀಯರ ಪ್ರಕಾರ ಕಳೆದ ವರ್ಷ ವಾರ್ಡಗಳಲ್ಲಿ ನಗರ ಪಂಚಾಯತ್ ವತಿಯಿಂದ ನೀರಿಗಾಗಿ ಕೊಳವೆಬಾವಿಗಳನ್ನು ನಿರ್ಮಿಸಲಾಗಿದ್ದು ಇದೀಗ ತಮ್ಮ ತಮ್ಮ ಮನೆಯಲ್ಲಿರುವ ಬಾವಿಗಳ ನೀರು ಬತ್ತಿರುತ್ತವೆ.

ಆದುದರಿಂದ ನಗರ ಪಂಚಾಯತ್ ವತಿಯಿಂದ ಕೂಡಲೇ ಸ್ಪಂದಿಸಿ ನೀರಿನ ಬವಣೆಯನ್ನು ನೀಗಿಸುವಂತೆ ಸುಳ್ಯ ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೋ ಕೊ ರವರು ನ.ಪಂ ಮುಖ್ಯಾಧಿಕಾರಿಗೆಮನವಿ ಮಾಡಿಕೊಂಡಿರುತ್ತಾರೆ.

Comments are closed.