ಪಾಕ್ ಕದನ ವಿರಾಮ ಉಲ್ಲಂಘನೆ | ಐವರು ಭಾರತೀಯ ಕಮಾಂಡೋಗಳ ಹತ್ಯೆ | ಭಾರತೀಯ ಸೇನೆಯಿಂದ 8 ಉಗ್ರರು, 15 ಸೈನಿಕರು ಫಿನಿಶ್ !

1.ನವದೆಹಲಿ: ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಖೇರನ್ ಸೆಕ್ಟರ್ ಎಲ್‌ಒಸಿಯಲ್ಲಿ ಏಪ್ರಿಲ್ 10 ರಂದು ನಡೆಸಿದ ಕಾರ್ಯಾಚರಣೆಯಲ್ಲಿ 15 ಮಂದಿ ಪಾಕಿಸ್ತಾನ ಸೈನಿಕರು, 8 ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಿದೆ.

ಎಲ್‌ಒಸಿಯಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯ ಫಿರಂಗಿದಳ, ವಾಯುದಳ ನಡೆಸಿದ ದಾಳಿಯಲ್ಲಿ 15 ಪಾಕಿಸ್ತಾನ ಸೈನಿಕರು ಮತ್ತು 8 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಭಾರತೀಯ ವಿಶೇಷ ಪಡೆ ಐವರು ಕಮಾಂಡೋಗಳನ್ನು ಪಾಕ್ ಉಗ್ರರು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಸೇಡು ತೀರಿಸಿಕೊಂಡಿದೆ.

ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಉಗ್ರರ ಅಡಗುತಾಣಗಳನ್ನು ನಾಶಪಡಿಸಿದೆ. ಶುಕ್ರವಾರ ರಾತ್ರಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಕಮಾಂಡೋಗಳ ಸಾವಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಭಾರತೀಯ ಸೇನೆ ಸರಿಯಾದ ತಿರುಗೇಟು ನೀಡಿದೆ. ವಾಯು ದಾಳಿ ನಡೆಸಿ ಉಗ್ರರ ಅಡಗು ತಾಣಗಳನ್ನು ನಾಶ ಮಾಡಿದೆ.

ಹತ್ಯೆಗೀಡಾದ ಐವರು ಭಯೋತ್ಪಾದಕರಲ್ಲಿ ಮೂವರು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರಾಗಿದ್ದು, ಇಬ್ಬರು ಜೈಶ್-ಇ-ಮೊಹಮ್ಮದ್ ಸಂಘಟನೆಯ ತರಬೇತಿ ಪಡೆದಿದ್ದಾರೆ.

ಎಲ್‌ಒಸಿ ಉದ್ದಕ್ಕೂ ಶಾರ್ದಾ, ದುದ್ನಿಯಾಲ್, ಶಾಹಕೋಟ್ ಪ್ರದೇಶದಲ್ಲಿ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ ಎಂದು ಪಾಕಿಸ್ತಾನ ಸೇನೆ ಖಚಿತಪಡಿಸಿದೆ.

2. ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಕೇರ್ನಿ ಸೆಕ್ಟರ್ ಹಾಗೂ ಕುಪ್ವಾರಾ ಜಿಲ್ಲೆಯ ಟಾಂಗ್ದಾರ್ ಮತ್ತು ಕರ್ನಾಹ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಆದಿತ್ಯವಾರ ನಡೆಸಿದ ಎರಡು ಪ್ರತ್ಯೇಕ ಕದನ ವಿರಾಮ ಉಲ್ಲಂಘನೆ, ಅನಿಯಂತ್ರಿತ ಗುಂಡಿನ ದಾಳಿಯ ಪರಿಣಾಮವಾಗಿ ಮೂವರು ನಾಗರಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ನಾಗರಿಕರನ್ನು ಜಾವೇದ್ ಖಾನ್, ಜಿಎಚ್ ರಸೂಲ್ ಖಾನ್ ಮತ್ತು ರೇಡಿ ಚೌಕಿಬಾಲ್ ಎಂದು ಗುರುತಿಸಲಾಗಿದೆ. ಪಾಕಿಸ್ತಾನ ಸೇನಾಪಡೆ ಇಂದು ಮಧ್ಯಾಹ್ನದ ಹೊತ್ತಿಗೆ ಸೇನೆ ನೆಲೆ ಹಾಗೂ ಕೇರ್ನಿ ಸೆಕ್ಟರ್ ನ ಪ್ರದೇಶದ ಮೇಳೆ ಮೋರ್ಟಾರ್ ಶೆಲ್ಸ್ ಹಾಗೂ ಗುಂಡಿನ ದಾಳಿ ನಡೆಸಿದ್ದು, ಇದರಿಂದ ಸ್ಥಳೀಯ ಜನರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ. ಕುಪ್ವಾರ ಜಿಲ್ಲೆಯ ಟಾಂಗ್ದಾರ್ ಮತ್ತು ಕರ್ನಾಹ್ ಸೆಕ್ಟರ್ ನಲ್ಲಿಯೂ ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

ಭಾರತೀಯ ಸೇನಾ ಪಡೆ ಕೂಡ ಪ್ರತಿದಾಳಿಯ ಮೂಲಕ ತಕ್ಕ ಉತ್ತರ ನೀಡಿದೆ. ವರದಿಯ ಪ್ರಕಾರ, ಪಾಕ್ ಸೇನೆ ಷಾರಾರಾತ್, ಜಲ್, ಬ್ಲ್ಯಾಕ್ ರಾಕ್ ಮತ್ತು ಅನಿಲ್ ಪೋಸ್ಟ್ ಅನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದೆ. ಕಳೆದ ಒಂದು ವಾರದಿಂದ ಪಾಕಿಸ್ತಾನಿ ಸೇನಾ ಪಡೆ ಮೆಂಧಾರ್, ಬಾಲ್ ಕೋಟ್, ಮ್ಯಾನ್ ಕೋಟ್, ಶಾಪುರ್, ಕೇರ್ನಿ ಮತ್ತು ಜಮ್ಮುವಿನ ಪೂಂಚ್ ಜಿಲ್ಲೆಯಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.

ಪಾಕ್ ಪಡೆಯ ಅಪ್ರಚೋದಿತ ದಾಳಿಗೆ ಪ್ರತಿಯಾಗಿ ಭಾರತೀಯ ಸೇನಾಪಡೆ ಮಿನಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕ್ ಪಡೆ ಹಲವಾರು ಬಂಕರ್ ಗಳನ್ನು ನಾಶಪಡಿಸಿ, ಹಲವು ಪಾಕ್ ಸೈನಿಕರನ್ನು ಹತ್ಯೆಗೈದಿತ್ತು. ಈ ವರ್ಷ ಪಾಕಿಸ್ತಾನ ಸುಮಾರು 2000 ಬಾರಿ ಕದನ ವಿರಾಮ ಉಲ್ಲಂಘಿಸಿರುವುದಾಗಿ ವರದಿ ತಿಳಿಸಿದೆ.

Leave A Reply

Your email address will not be published.