ಅನಾರೋಗ್ಯ ಕೇವಲ ವದಂತಿ | ನಾನು ಆರೋಗ್ಯವಾಗಿದ್ದೇನೆ -ಎನ್.ಮುತ್ತಪ್ಪ ರೈ

ಬೆಂಗಳೂರು : ಕೆಲವು ಗಂಟೆಗಳ ಹಿಂದೆ ಜಯಕರ್ನಾಟಕ ಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪ ರೈ ಅವರ ಆರೋಗ್ಯದಲ್ಲಿ ಏರುಪೇರು ,ಗಂಭೀರ ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ವತಃ ಮುತ್ತಪ್ಪ ರೈ ಅವರೇ ಸ್ಪಷ್ಟನೆ ನೀಡಿದ್ದಾರೆ.

ಒಂದು ಕಾಲದಲ್ಲಿ ಭೂಗತ ಲೋಕದಲ್ಲಿ ಡಾನ್ ಆಗಿದ್ದ , ಮೂಲತಃ ದ.ಕ.ದ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ನೆಟ್ಟಾಳ ಮುತ್ತಪ್ಪ ರೈ ಅವರು ಬಳಿಕ‌ ಭೂಗತ ಲೋಕದ ಚಟುವಟಿಕೆಗಳಿಗೆ ವಿದಾಯ ಹೇಳಿ,ಜಯ ಕರ್ನಾಟಕ ಸಂಘಟನೆಯನ್ನು ಕಟ್ಟಿ ಸಮಾಜ ಮುಖಿ ಕಾರ್ಯಗಳಲ್ಲಿ ಸಕ್ರೀಯರಾಗಿದ್ದರು.

ಕೆಲ ತಿಂಗಳ ಹಿಂದೆ ಸ್ವತಃ ಮಾಧ್ಯಮ ದವರಿಗೆ ಅನಾರೋಗ್ಯದ ವಿಚಾರವನ್ನು ತಿಳಿಸಿದ್ದರು.ಇದನ್ನೇ ಈಗ ಕೆಲವರು ಮುತ್ತಪ್ಪ ರೈ ಅವರು ಗಂಭೀರ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಮುತ್ತಪ್ಪ ರೈ ಅವರು, ನಾನು ಆರೋಗ್ಯವಾಗಿದ್ದೇನೆ. ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ ಎಂದು ಸ್ಪಷ್ಠನೆ ನೀಡಿದ್ದಾರೆ.

Leave A Reply

Your email address will not be published.