ಬೆಳ್ಳಾರೆ ಬಜನಿಗುತ್ತು ಕುಟುಂಬಸ್ಥರಿಂದ ದೈವ ನರ್ತಕರಿಗೆ ನೆರವು
ದೈವ ನರ್ತನ ಕಾರ್ಯವನ್ನು ಮಾಡುವ ಹಾಗೂ ದೈವದ ಚಾಕರಿಯನ್ನು ಮಾಡುವ 9 ಮನೆಗಳಿಗೆ ಬೆಳ್ಳಾರೆ ಬಜನಿಗುತ್ತು ಕುಟುಂಬದ ವತಿಯಿಂದ ತಲಾ 25ಅಕ್ಕಿ ಮತ್ತು ತಲಾ ಒಂದು ಸಾವಿರ ನೀಡಲಾಯಿತು.
ಕೋರೋನಾ ಮಹಾಮಾರಿಯಿಂದ ನೇಮೋತ್ಸವ ನಡೆಯುವ ಈ ಸಮಯದಲ್ಲಿ ನೇಮೋತ್ಸವವಿಲ್ಲದೆ ಅದನ್ನೇ ನಂಬುತ್ತಿರುವ ಕುಟುಂಬಗಳು ಬಹಳ ಕಷ್ಟದಲ್ಲಿದ್ದು, ಅವರ ಕಷ್ಟದ ಸಮಯದಲ್ಲಿ ಅವರು ನೇಮ ಕಟ್ಟುವ ಮನೆಯವರು ಅವರೊಂದಿಗಿದ್ದು ಅವರ ಕಷ್ಟದಲ್ಲಿ ಭಾಗಿಗಳಾಗಬೇಕೆಂದು ಕುಟುಂಬದ ಪ್ರಮುಖರು ನಿರ್ಧರಿಸಿದಂತೆ ಬಜನಿಗುತ್ತು ಪದ್ಮನಾಭ ರೈ, ಜಗನ್ನಾಥ ರೈ, ಭಾಸ್ಕರ ಶೆಟ್ಟಿ, ಮಹಾಬಲ ರೈ, ಕೃಷ್ಣ ರೈ, ಸುಧಾಕರ್ ರೈ, ಚಂದ್ರಶೇಖರ್ ರೈ, ಹರೀಶ್ ರೈ, ಅಶೋಕ್ ರೈ ಮೊದಲಾದವರು ದೈವ ನರ್ತಕರ ಮನೆಗಳಿಗೆ ತೆರಳಿ ವಸ್ತುಗಳ ವಿತರಿಸಿದರು.