Beer: ಬಿಯರ್ ಕುಡಿದರೆ ಮೆದುಳಿಗೆ ಡ್ಯಾಮೇಜ್?

Beer: ಬಿಯರ್ ಪ್ರಿಯರಿಗೆ ಇದೀಗ ಸಂಶೋಧನ ವರದಿಯೊಂದು ದೊಡ್ಡ ಆಘಾತವನ್ನು ನೀಡಿದೆ. ಬಿಯರ್ ನಲ್ಲೂ ಅಲ್ಪ ಪ್ರಮಾಣದ ಆಲ್ಕೋಹಾಲ್ ಅಂಶ ಇದ್ದು ಇದು ನಮ್ಮ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದಾಗಿ ಇದು ತಿಳಿಸಿದೆ.
ಸಂಶೋಧಕಿ ರೆಮಿ ಡೇವಿಯಟ್ ಅವರು ಈ ಕುರಿತಾಗಿ ಮಾತನಾಡಿದ್ದು ‘ನೇಚರ್ ಕಮ್ಯುನಿಕೇಷನ್ಸ್’ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಸ್ವಲ್ಪ ಪ್ರಮಾಣದ ಆಲ್ಕೋಹಾಲ್ ಕೂಡ ಮೆದುಳನ್ನು ಕುಗ್ಗಿಸುತ್ತದೆ. ಇದರಿಂದ 10 ವರ್ಷಗಳಿಗಿಂತ ಬೇಗನೆ ಮೆದುಳಿಗೆ ವಯಸ್ಸಾದಂತೆ ಆಗುತ್ತದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಮೆದುಳಿನ MRI ಸ್ಕ್ಯಾನ್‌ಗಳನ್ನ ವಿಶ್ಲೇಷಿಸಿದಾಗ, ಪ್ರತಿದಿನ 1 ರಿಂದ 2 ಗ್ಲಾಸ್ ಆಲ್ಕೋಹಾಲ್ ಕುಡಿಯುವವರ ಮೆದುಳಿಗೆ ಬೇಗ ವಯಸ್ಸಾಗುವುದನ್ನು ಕಂಡು ಕೊಂಡಿದ್ದಾರೆ.
ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ದಿನಕ್ಕೆ ಸರಾಸರಿ 3 ಅಥವಾ ಅದಕ್ಕಿಂತ ಹೆಚ್ಚು ಗ್ಲಾಸ್ ಮದ್ಯಪಾನ ಸೇವಿಸುವ ಮಹಿಳೆಯರು ಮತ್ತು ದಿನಕ್ಕೆ 4 ಅಥವಾ ಅದಕ್ಕಿಂತ ಹೆಚ್ಚು ಗ್ಲಾಸ್ ಮದ್ಯಪಾನಗಳನ್ನ ಮಾಡುವ ಪುರುಷರು ಒಳಗೊಂಡಿದ್ದರು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕರು ದಿನಕ್ಕೆ 1 ರಿಂದ 2 ಗ್ಲಾಸ್ ಆಲ್ಕೋಹಾಲ್, ಬಿಯರ್ ಅಥವಾ ವೈನ್ ಕುಡಿಯುವವರ ಮೆದುಳಿನ ಗಾತ್ರ ಮತ್ತು ಬೂದು ದ್ರವ್ಯದ ಪ್ರಮಾಣ ಕಡಿಮೆಯಾಗುವುದು ಕಂಡು ಬಂದಿದೆ.
Comments are closed.