ಮಂಗಳೂರಿನಿಂದ ತಮಿಳುನಾಡು ತೆರಳುತ್ತಿದ್ದ 7 ಜನ ಮೀನುಗಾರಿಕಾ ಕಾರ್ಮಿಕರನ್ನು ತಡೆದ ಪುತ್ತೂರು ಪೊಲೀಸರು !

ಮಂಗಳೂರಿನಿಂದ ಪುತ್ತೂರು ಮಾರ್ಗವಾಗಿ ಮೈಸೂರು ಮುಖಾಂತರ ತಮಿಳುನಾಡು ತೆರಳುತ್ತಿದ್ದ ಏಳು ಜನ ಮೀನುಗಾರಿಕಾ ಕಾರ್ಮಿಕರನ್ನು ಪುತ್ತೂರು ಪೊಲೀಸರು ತಡೆ ಹಿಡಿದು, ಪೊಲೀಸ್ ಸಿಬ್ಬಂದಿಗಳು ಮತ್ತು ಪುತ್ತೂರು ತಹಶೀಲ್ದಾರ್ ರವರು ವಿಚಾರಣೆ ನಡೆಸಿ, ಅವರಿಗೆ ಅಕ್ಕಿ,ಅಗತ್ಯ ಸಾಮಗ್ರಿಗಳನ್ನು ನೀಡಿ ಮರಳಿ ಮಂಗಳೂರಿನ ವಾಸ್ತವ್ಯ ಸ್ಥಳಕ್ಕೆ ಕಳುಹಿಸಲಾಯಿತು.

ಮೀನುಗಾರಿಕಾ ಕಾರ್ಮಿಕರು ಮಂಗಳೂರಿನಿಂದ ಪುತ್ತೂರಿನವರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದು, ಕೆಲಸವಿಲ್ಲದ ಕಾರಣ ಮುಂದೆ ಮೈಸೂರು ತೆರಳಿ, ಅಲ್ಲಿಂದ ತಮಿಳುನಾಡು ಸೇರುವ ಪ್ರಯತ್ನದಲ್ಲಿದ್ದರು.

ಇವರೆಲ್ಲರರೂ ತಮಿಳುನಾಡಿನ ಕಲ್ಲಕುರ್ಚಿ ನಿವಾಸಿಗಳು ಎನ್ನಲಾಗಿದೆ. ಕಾರ್ಮಿಕರಿಕರೆಲ್ಲರಿಗೂ ಏಪ್ರಿಲ್ 30 ರವರೆಗೆ ಮನೆ ಬಿಟ್ಟು ತೆರಳದಂತೆ ಕೈಗೆ ಸೀಲ್ ಹಾಕಲಾಗಿದ್ದು, ಮರಳಿ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ.

Leave A Reply

Your email address will not be published.