ಕೋಲ್ಚಾರು ಕನ್ನಡಿ ತೋಡು ಬಳಿ ಲಭಿಸಿದ ಅಪರಿಚಿತ ಶವದ ಗುರುತು ಪತ್ತೆ

ವರದಿ : ಹಸೈನಾರ್, ಜಯನಗರ

ಆಲೆಟ್ಟಿ ಗ್ರಾಮದ ಕೊಲ್ಚಾರು ಭಾಗದಿಂದ ಕೇರಳದ ಬಂದಡ್ಕಕ್ಕೆ ಸಂಪರ್ಕಿಸುವ ರಸ್ತೆ ಮಧ್ಯೆ ಕನ್ನಡಿತ್ತೊಡು ಅರಣ್ಯ ಪ್ರದೇಶದಲ್ಲಿ ಏಪ್ರಿಲ್ 11ರಂದು ಲಭಿಸಿದ ಅಪರಿಚಿತ ಶವದ ಗುರುತು ಪತ್ತೆಯಾಗಿದೆ.

ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದ್ದ ಮೃತ ಶರೀರವು ಬಂದಡ್ಕ ನಿವಾಸಿ ಡೊಮನಿಕ್ 84 ವರ್ಷ ಎಂದು ತಿಳಿದುಬಂದಿದೆ. ಕಳೆದ ಮಾರ್ಚ್ 4 ರಂದು ಡೊಮನಿಕ್ ರವರು ಬಂದಡ್ಕ ತಮ್ಮ ಮನೆಯಿಂದ ಕಾಣೆಯಾಗಿದ್ದ ದೂರನ್ನು ಮನೆಯವರು ಸ್ಥಳೀಯ ಬೇಡಗಂ ಪೋಲಿಸ್ ಠಾಣೆಯಲ್ಲಿ ದೂರುಗಳ ನೀಡಲಾಗಿತ್ತು.

ನಂತರದ 37ನೆಯ ದಿನದಂದು ಕೊಲ್ಚಾರು ಕನ್ನಡಿತೋಡು ಸ್ಥಳೀಯರಿಗೆ ಅರಣ್ಯಪ್ರದೇಶದಲ್ಲಿ ಮೃತ ಶರೀರವನ್ನು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿತ್ತು. ಸ್ಥಳೀಯರು ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ನಂತರ ಮೃತ ವ್ಯಕ್ತಿ ಬ್ಯಾಡಗಿ ಪೊಲೀಸ್ ಠಾಣೆಯ ಪರಿಮಿತಿಯಲ್ಲಿ ಬರುವ ಕಾರಣ ಮುಂದಿನ ತನಿಖೆಗೆ ಕೇರಳ ಪೊಲೀಸರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ವಿಷಯ ತಿಳಿದ ಕುಟುಂಬಸ್ಥರು ಮತ್ತು ಪುತ್ರ ಸ್ಥಳಕ್ಕೆ ಧಾವಿಸಿ ಶರೀರವನ್ನು ಗುರುತು ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.