ಎ.14 | ಬೆಳಿಗ್ಗೆ 10ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ| ಲಾಕ್‌ಡೌನ್ 2.0 ಪ್ರಮುಖ ವಿಚಾರ?

Share the Article

ನವ ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಏ.14ರಂದು ಬೆಳಿಗ್ಗೆ 10 ಕ್ಕೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಹೇರಿರುವ ಲಾಕ್‌ಡೌನ್ ಬಗ್ಗೆ ಯಾವ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನುವುದು ಕುತೂಹಲದ ಸಂಗತಿ. ವಿವಿಧ ರಾಜ್ಯಗಳ ಕೊರೋನಾ ಪರಿಸ್ಥಿತಿಯನ್ನು ಅವಲೋಕಿಸಲು ಏ. 11ರಂದು ಮುಖ್ಯಮಂತ್ರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಇದೀಗ ಪ್ರಧಾನಿಯವರ ಸಂದೇಶಕ್ಕೆ ಇಡೀ ದೇಶವೇ ಕಾಯುತ್ತಿದೆ.

ಕೇಂದ್ರ ದ ಮಾರ್ಗಸೂಚಿಗಳಿಗೆ ಕಾಯುತ್ತಿರುವ ರಾಜ್ಯ ಸರಕಾರಗಳು ಪ್ರಧಾನಿ ಮೋದಿ ಅವರ ಅಧಿಕೃತ ಗೈಡ್ ಲೈನ್ ಗೆ ಕಾಯುತ್ತಿದ್ದಾರೆ .ಎ.14ಕ್ಕೆ 1 ನೇ ಹಂತದ ಲಾಕ್ ಡೌನ್ ಮುಕ್ತಾಯವಾಗಲಿದೆ.ಎ.14ರ ಭಾಷಣದಲ್ಲಿ ಲಾಕ್ ಡೌನ್ 2.0 ಸಮಗ್ರ ಮಾರ್ಗಸೂಚಿಯೇ ಪ್ರಮುಖ ವಿಚಾರವಾಗಿದೆ ಎಂದು ಹೇಳಲಾಗಿದೆ.

Leave A Reply