ಎ.30 ರವರೆಗೆ ವಿಸ್ತರಣೆ, ಕೆಲವೊಂದು ವಿನಾಯಿತಿ,ಮೀನುಗಾರಿಕೆಗೆ ಅವಕಾಶ- ಬಿಎಸ್‌ವೈ

Share the Article

ಕೊರೊನಾ ವೈರಸ್ ನಿಯಂತ್ರಿಸುವ ಸಂಬಂಧ ಏಪ್ರಿಲ್ 30ರವರೆಗೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರಿಯಲಿದೆ.

ದೇಶಾದ್ಯಂತ ಹೇರಲಾಗಿರುವ 21 ದಿನಗಳ ಲಾಕ್‍ಡೌನ್ ಏ.14ಕ್ಕೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ಈ ಸಂದರ್ಭದಲ್ಲಿ ಲಾಕ್‍ಡೌನ್ ವಿಧಿಸಿದ ಪರಿಣಾಮ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಏ.30ರವರೆಗೆ ಲಾಕ್‍ಡೌನ್ ವಿಸ್ತರಿಸಬೇಕೆಂದು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮನವಿ ಮಾಡಿದ್ದರು. ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಯಡಿಯೂರಪ್ಪ ಏ.30ರವರೆಗೆ ಲಾಕ್‍ಡೌನ್ ವಿಸ್ತರಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದರು.ಈ ಮುಂದುವರಿದ ಲಾಕ್‌ಡೌನ್ ನಲ್ಲಿ ಕೆಲವೊಂದು ವಿನಾಯಿತಿ ಇದೆ.ಮೀನುಗಾರಿಕೆಗೆ ಅವಕಾಶ ಇದೆ ಎಂದು ಮುಖ್ಯಮಂತ್ರಿ ಬಿಎಸ್‌ವೈ ತಿಳಿಸಿದರು.

ಮೀನುಗಾರಿಕೆಗೆ ನಿರ್ಬಂಧ ಇರುವ ಕಾರಣ ಕರಾವಳಿ ಜಿಲ್ಲೆಗಳ ಮೀನುಗಾರರು ಬಹಳಷ್ಟು ನಷ್ಟ ಅನುಭವಿಸಿದ್ದರು. ಜೂನ್ ನಂತರ ಮಳೆಗಾಲ ಆರಂಭವಾಗುವ ಕಾರಣ ನಂತರ ಎರಡು- ಮೂರು ತಿಂಗಳು ಕಡಲಿಗೆ ಇಳಿಯಲಾಗುವುದಿಲ್ಲ. ಹೀಗಾಗಿ ಈಗ ಮೀನುಗಾರಿಕೆಯ ಮೇಲಿದ್ದ ಲಾಕ್ ಡೌನ್ ತೆರವುಗೊಳಿಸಿರುವುದು ಕಡಲ ಮಕ್ಕಳ ಸಂತಸಕ್ಕೆ ಕಾರಣವಾಗಿದೆ.

ಹಾಗಾದರೆ ನಮ್ಮ ದಿನನಿತ್ಯದ ಆಹಾರವಾದ ಮೀನು ಇನ್ನು ಸುಲಭವಾಗಿ ಸಿಗುತ್ತದೆ.

Leave A Reply

Your email address will not be published.