ಕಡಬ : ಮಹಿಳಾ ಪೊಲೀಸರ ಮಾನವೀಯತೆಯ ಸೇವೆಗೆ ಶ್ಲಾಘನೆ

ಕಡಬ, ಎ.11. ಬಡತನದಿಂದ ದಿನದೂಡುತ್ತಿದ್ದ ವೃದ್ಧೆಯೋರ್ವರಿಗೆ ದಿನಬಳಕೆಯ ಸಾಮಾಗ್ರಿಗಳನ್ನು ಖರೀದಿಸಿಕೊಟ್ಟು ಕಡಬ ಠಾಣೆಯ‌ ಮಹಿಳಾ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ವೃದ್ಧೆಯ ಮನೆಯಲ್ಲಿ ದಿನ ಬಳಕೆಯ ವಸ್ತುಗಳು ಇಲ್ಲದಿರುವ ಬಗ್ಗೆ ಮಾಹಿತಿ ತಿಳಿದ ಮಹಿಳಾ ಸಿಬ್ಬಂದಿಗಳಾದ ಭಾಗ್ಯಮ್ಮ ಮತ್ತು ನಾಗರತ್ನ ತಮ್ಮದೇ ದುಡ್ಡಿನಲ್ಲಿ ಸಾಮಾಗ್ರಿಗಳನ್ನು ಖರೀದಿಸಿ ಆಟೋರಿಕ್ಷಾದ ಮೂಲಕ ವೃದ್ಧೆಯನ್ನು ಕಳುಹಿಸಿಕೊಟ್ಟರು.

ಸ್ಥಳೀಯರೋರ್ವರು ಈ ಫೋಟೋ ಕ್ಲಿಕ್ಕಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶುಕ್ರವಾರ ಕೂಡಾ ಮರ್ಧಾಳದಲ್ಲಿ ಕರ್ತವ್ಯ ನಿರತರಾಗಿದ್ದ ಕಡಬ ಠಾಣೆಯ ಮಹಿಳಾ ಸಿಬ್ಬಂದಿಗಳಾದ ಚಂದ್ರಿಕಾ ಹಾಗೂ ದಿವ್ಯಾ ತಿರುಪತಿಯಿಂದ ಆಗಮಿಸಿದ್ದ ಪಾದಚಾರಿ ವೃದ್ಧರೋರ್ವರನ್ನು ಉಪಚರಿಸಿ ಬಿಸ್ಕತ್ತು, ತಂಪು ಪಾನೀಯ ಹಾಗೂ ನಗದು ನೀಡಿ ಮಾನವೀಯತೆ ಮೆರೆದಿದ್ದರು.

Leave A Reply

Your email address will not be published.