ಎಲ್ಲಾ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರ ನೇಮಿಸಿದ ಸಿಎಂ.ಬಿಎಸ್ವೈ
ಬೆಂಗಳೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವ್ಯಾಪಕವಾದ ಬಿಗಿ ಭದ್ರತೆಯ ಕ್ರಮ ಹಾಗೂ ಸಮಾರೋಪಾದಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಿದ್ದಾರೆ.
ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಾದ್ಯಂತ ಲಾಕ್ ಡೌನ್ ಪಾಲಿಸುತ್ತಿದ್ದು, ಸದ್ಯ ಎಲ್ಲಾ ಸಚಿವರಿಗೂ ಒಂದೊಂದು ಜಿಲ್ಲೆಯ ಉಸ್ತುವಾರಿ ನೀಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಜವಾಬ್ದಾರಿಯನ್ನು ಐಎಎಸ್ ಅಧಿಕಾರಿಗಳಿಗೆ ನೀಡಲಾಗಿದ್ದು, ಉಸ್ತುವಾರಿ ಹೊಣೆಯನ್ನು ಎಲ್ಲಾ ಜಿಲ್ಲೆಗಳ ಸಚಿವರಿಗೆ ನೀಡಲಾಗಿದೆ.
ಜಿಲ್ಲಾ ಜವಾಬ್ದಾರಿ – ಶಾಸಕರ ಪಟ್ಟಿ
ಬೆಂಗಳೂರು ನಗರ ಜಿಲ್ಲೆ- ಬಿಎಸ್ ಯಡಿಯೂರಪ್ಪ
ಬೆಂಗಳೂರು ಗ್ರಾಮಾಂತರ – ಆರ್.ಅಶೋಕ್
ರಾಮನಗರ – ಸಿ.ಎಸ್.ಅಶ್ವಥ್ ನಾರಾಯಣ
ಮಂಡ್ಯ – ಕೆ.ಸಿ.ನಾರಾಯಣಗೌಡ
ಮೈಸೂರು – ಎಸ್.ಟಿ.ಸೋಮಶೇಖರ್
ಚಾಮರಾಜನಗರ – ಎಸ್.ಸುರೇಶ್ ಕುಮಾರ್
ಚಿತ್ರದುರ್ಗ – ಬಿ.ಶ್ರೀರಾಮುಲು
ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ ಪೂಜಾರಿ
ಕೋಲಾರ – ಎಚ್.ನಾಗೇಶ್
ಚಿಕ್ಕಬಳ್ಳಾಪುರ – ಕೆ.ಸುಧಾಕರ್
ಶಿವಮೊಗ್ಗ – ಕೆ.ಎಸ್.ಈಶ್ವರಪ್ಪ
ರಾಯಚೂರು – ಲಕ್ಷ್ಣಣ ಸವದಿ
ಬಾಗಲಕೋಟೆ – ಗೋವಿಂದ ಕಾರಜೋಳ
ವಿಜಯಪುರ – ಶಶಿಕಲಾ ಜೊಲ್ಲೆ
ಚಿಕ್ಕಮಗಳೂರು – ಸಿ.ಟಿ.ರವಿ
ಬಳ್ಳಾರಿ – ಆನಂದಸಿಂಗ್
ಕೊಪ್ಪಳ – ಬಿ.ಸಿ. ಪಾಟೀಲ್
ದಾವಣಗೆರೆ – ಬೈರತಿ ಬಸವರಾಜ
ಉತ್ತರ ಕನ್ನಡ – ಶಿವರಾಮ್ ಹೆಬ್ಬಾರ್
ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿ ಜವಾಬ್ದಾರಿ ಜೊತೆಗೆ ಉಡುಪಿಯ ಹೆಚ್ಚುವರಿಯಾಗಿ ನೀಡಲಾಗಿದೆ.
ಜೆ.ಸಿ. ಮಾಧುಸ್ವಾಮಿ ಅವರಿಗೆ ತುಮಕೂರು ಮತ್ತು ಹಾಸನವನ್ನು ಹೆಚ್ಚುವರಿ ನೀಡಿದ್ದಾರೆ.
ವಿ.ಸೋಮಣ್ಣ ಅವರಿಗೆ ಕೊಡಗು ಜಿಲ್ಲೆಯ ಹೆಚ್ಚುವರಿಯಾಗಿ ನೀಡಲಾಗಿದೆ.
ಪ್ರಭು ಚವ್ಹಾಣ ಅವರಿಗೆ ಬೀದರ್ ಮತ್ತು ಯಾದಗಿರಿ ಜವಾಬ್ದಾರಿ ನೀಡಲಾಗಿದೆ.
ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳನ್ನು ನೀಡಲಾಗಿದೆ.