ಪುತ್ತೂರಿನಲ್ಲಿ ಹೋಟೆಲ್ ಉದ್ಯಮಿಗಳಿಗೆ ಆಹ್ವಾನ, ಪಾರ್ಸೆಲ್ ಸರ್ವಿಸ್ ಕೊಡುವವರಿಗೆ ಅನುಮತಿ ನೀಡುತ್ತೇವೆ – ಪುತ್ತೂರು ಶಾಸಕ ಸಂಜೀವ ಮಠಂದೂರು

ಪುತ್ತೂರಿನಲ್ಲಿ ಪಾರ್ಸೆಲ್ ಸರ್ವಿಸ್ ನೀಡಲು ಹೋಟೆಲ್ ಉದ್ಯಮಿಗಳು ಮುಂದೆ ಅಂದರೆ ಅವರಿಗೆ ಅನುಮತಿ ನೀಡುವುದಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಹೇಳಿದ್ದಾರೆ.

ಅವರು ನಿನ್ನೆ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಪುತ್ತೂರಿನಲ್ಲಿ ಬೇರೆ ಬೇರೆ
ಊರುಗಳಿಂದ ಬಂದು ಸರ್ಕಾರದ ಕೆಲಸ ಮಾಡುತ್ತಿರುವ ಹಲವು ಜನರು ಇದ್ದಾರೆ. ಅವರಿಗೆ ಊಟದ ವ್ಯವಸ್ಥೆಯ ಅನಾನುಕೂಲತೆ ಇದೆ. ಎಷ್ಟೋ ಜನ ಬ್ಯಾಚುಲರ್ಸ್ ಇದ್ದಾರೆ. ಪರವೂರಿನಿಂದ ಒಂದು ಇಲ್ಲಿ ಹಲವು ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಬೇಗನೆ ಮನೆ ಬಿಡಬೇಕಾಗುತ್ತದೆ.

ರಾತ್ರಿ ಕೂಡ ಮನೆಗೆ ಮರಳುವಾಗ ಲೇಟ್ ಆಗುತ್ತದೆ. ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ಅಂತವರಿಗೆ ಹೋಟೆಲ್ ನಿಂದ ಪಾರ್ಸೆಲ್ ತೆಗೆದುಕೊಳ್ಳುವುದರಿಂದ ಅನುಕೂಲವಾಗುತ್ತದೆ.

ನಾನು ಕೂಡ ಮದ್ಯಾಹ್ನ ಪುತ್ತೂರಿನಲ್ಲಿ ಪಾರ್ಸೆಲ್ ತಂದೇ ಊಟ ಮಾಡುವುದು ಎಂದಿದ್ದಾರೆ.

ಆಸಕ್ತ ಹೋಟೆಲ್ ಉದ್ಯಮಿಗಳು ಶಾಸಕರ ಕಚೇರಿ ಅಥವಾ ವಾರ್ ರೂಂ ಅನ್ನು ಸಂಪರ್ಕಿಸಬಹುದು.

Leave A Reply

Your email address will not be published.