ಮಾಂಸದಂಗಡಿ ತೆರೆಯಲು ಸರಕಾರದ ಅನುಮತಿ
ಇವತ್ತು ರಾಜ್ಯದೆಲ್ಲೆಡೆ ಮೊಟ್ಟೆ ಮಾಂಸ ಸಿಗುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಮೊಟ್ಟೆ, ಕೋಳಿ ಮತ್ತು ಮಟನ್ ಬಹುಸಂಖ್ಯಾತರ ಆಹಾರ. ಲಾಕ್ ಡೌನ್ ನ ಕಾರಣದಿಂದ ಮಾಂಸವನ್ನು ಬಂದ್ ಮಾಡಿದ ಪರಿಣಾಮ ಮಾಂಸಪ್ರಿಯರ ನಾಲಿಗೆ ರುಚಿ ಕಳಕೊಂಡಿದ್ದಾರೆ.
ಮಾಂಸದ ಪದಾರ್ಥ ಮಾಡದ ಅಡುಗೆ ಮನೆಯಲ್ಲಿ ದೊಡ್ಡ ಪ್ರಮಾಣದ ಜಗಳಗಳಾಗುತ್ತಿದೆಯಂತೆ. ಈಗ ಮಾಂಸವನ್ನೂ ಅಗತ್ಯ ಆಹಾರ ಎಂದು ಪರಿಗಣಿಸಿದ ಸರಕಾರವು ಮಾಂಸ ಮಾರಾಟಕ್ಕೆ ರಾಜ್ಯಾದ್ಯಂತ ಅನುಮತಿ ನೀಡಿದೆ. ಆದರೆ ಮೀನುಗಾರಿಕೆ ಅವಕಾಶ ಇಲ್ಲದಿರುವುದರಿಂದ ಹಸಿ ಮೀನು ಸದ್ಯ ದೊರಕದು.ಒಣ ಮೀನು ಮಾರಾಟ ಮಾಡಬಹುದು. ಸರಕಾರದ ಅನುಮತಿ ಗೆ ಮೊದಲೇ ಹಲವೆಡೆ ಮಾಂಸದಂಗಡಿ ತೆರೆದಿದೆ.
ಇಂದಿನಿಂದ ರಾಜ್ಯದ ಎಲ್ಲೆಡೆ ಮಾಂಸ ದೊರೆಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಬಂದರೆ ಸರಕಾರ ಅಡ್ಡಿಪಡಿಸುವುದಿಲ್ಲ ಎಂದಿದೆ.