ಪಾಣಾಜೆ : ಗೇರುಹಣ್ಣಿನ ಸಾರಾಯಿಗೆ ಸಿದ್ದತೆ | ಹುಳಿ ರಸ ವಶಕ್ಕೆ

ಪುತ್ತೂರು: ದೇಶಾದ್ಯಂತ ಲಾಕ್‌ಡೌನ್ ನಿಂದಾಗಿ ಮದ್ಯದಂಗಡಿ ಸಂಪೂರ್ಣ ಶಟರ್ ಎಳೆದುಕೊಂಡಿದೆ.

ಇಂತಹ ಪರಿಸ್ಥಿತಿಯಲ್ಲಿ ಹಲವು ಮದ್ಯಪ್ರಿಯರ ಬಾಯಿ ಚಪ್ಪೆ ಚಪ್ಪೆ ಆಗಿದೆ.ಇಂತಹ ಸಂದರ್ಭ ಉಪಯೋಗಿಸಿ ಲಭ್ಯ ಸಂಪನ್ಮೂಲದಲ್ಲಿ ಬಟ್ಟಿ ಸಾರಾಯಿಯಿಂದ ಪಾನಪ್ರಿಯರ ಗಂಟಲು ಒಣಗದಂತೆ ಕೆಲವರು ಪ್ರಯತ್ನ ಮಾಡುತ್ತಿದ್ದಾರೆ.

ಕೆಲಸವಿಲ್ಲದೆ ಇರುವ ಸಂದರ್ಭದಲ್ಲಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿ ಆದಾಯ ಗಳಿಸಲು ಮುಂದಾಗಿ ಕಂಬಿಯೊಳಗೆ ಕೂರಬೇಕಾದ ಸ್ಥಿತಿ ಬಂದಿದೆ.

ಇಂತಹುದ್ದೆ ಪ್ರಯತ್ನ ಮಾಡಿದ ಪಾಣಾಜೆಯ ಕೊಂದಲ್ಕಾನ ನಿವಾಸಿ ಚಂದ್ರಶೇಖರ ನಾಯ್ಕ ಅಬಕಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ಪುತ್ತೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪುತ್ತೂರು ವಲಯ ಅಬಕಾರಿ ನಿರೀಕ್ಷಕರ ತಂಡ ದಾಳಿ ನಡೆಸಿ ಮೂರು ಫೈಬರ್ ಬ್ಯಾರೆಲ್ ನಲ್ಲಿ ತುಂಬಿಸಿಟ್ಟಿದ ಸುಮಾರು 250 ಲೀಟರ್ ಹುಳಿ ರಸ ಹಾಗೂ ಆರೋಪಿಯನ್ನು ಬಂದಿಸಿದ್ದಾರೆ.

ಕೆಲದಿನಗಳ ಹಿಂದೆ ಪುತ್ತೂರು ಹೊರವಲಯ ನರಿಮೊಗರಿನಲ್ಲೂ ದಾಳಿ ನಡೆಸಿ ಒಬ್ಬರ ಮೇಲೆ ಪ್ರಕರಣ ದಾಖಲಿಸಿದ್ದರು,ಬೆಳ್ಳಾರೆ ಯಲ್ಲೂ ಪ್ರಕರಣ ದಾಖಲಿಸಲಾಗಿದೆ.

Leave A Reply

Your email address will not be published.