ಬ್ಯಾಂಕ್ ಸಾಲದ ಕಂತುಗಳ ಮುಂದೂಡಿಕೆ |ಸಾಲದ ಸರಮಾಲೆ ಅದರಿಂದ ಗ್ರಾಹಕ ಹೇಗೆ ಪಾರು?
ಬ್ಯಾಂಕ್ ಸಾಲದ ಕಂತುಗಳ ಮುಂದೂಡಿಕೆಯಿಂದ ಗ್ರಾಹಕ ಹೇಗೆ ಪಾರಾಗಲು ಸಾಧ್ಯ. ಇದರಿಂದಾಗಿ ಗ್ರಾಹಕ ಈಗ ಗೊಂದಲದ ಗೋಜಿನಲ್ಲಿ ಇದ್ದಾನೆ.
ಸರಕಾರ ಮತ್ತು ಆರ್.ಬಿ.ಐ ನಿಂದ ನೀಡಿದ ನಿಯಮಗಳಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ. ಗ್ರಾಹಕನಿಗೆ ಇಎಮ್ಐ,ಬ್ಯಾಂಕಿನ ಸಾಲದ ಬಡ್ಡಿ ಅಸಲು ತುಂಬವುದರ ಬಗ್ಗೆ ಸಮನ್ವಯಿತವಾದ ಸುತ್ತೋಲೆ ಬಿಡುಗಡೆ ಮಾಡಬೇಕು.
ಗ್ರಾಹಕನಿಗೆ ಆಗುತ್ತಿರುವ ಗೊಂದಲ,ಸಮಸ್ಯೆ ಪರಿಹರಿಸಬೇಕಿದೆ.
ಹಲವಾರು ಖಾಸಗಿ ಬ್ಯಾಂಕುಗಳು ತಮ್ಮ ತಿಂಗಳ ಕಂತುಗಳನ್ನು ತುಂಬಲು ನೀಡಿದ ಮೂರು ತಿಂಗಳ ಕಾಲವಕಾಶ ನೀಡಿದ ನಿಯಮ ಸರಿಯಾಗಿ ಪಾಲಿಸುತ್ತಿಲ್ಲ ಖಾತೆಯಲ್ಲಿ ಜಮೆಯಿದ್ದ ಹಣವನ್ನು ಕಡಿತ ಮಾಡುತ್ತಿರುವುದು ಕಂಡು ಬರುತ್ತಿದೆ.
ಇದರಿಂದ ದೇವರು ವರ ಕೊಟ್ಟರೂ ಪೂಜಾರಿ ಬಿಡಲಿಲ್ಲ ಎಂಬ ಗಾದೆ ಮಾತಿನಂತೆ ಆಗಿದೆ ಗ್ರಾಹಕನ ಪರಿಸ್ಥಿತಿ. ಲಾಕ್ಡೌನ್ ನಿಂದ ಹಲವಾರು ಗ್ರಾಹಕರಿಗೆ ತುಂಬಲಾರದಷ್ಟು ನಷ್ಟ ಪರಿಣಮಿಸುತ್ತಿದೆ. ದಯಮಾಡಿ ಸರಕಾರ ಹಾಗೂ ಆರ್.ಬಿ.ಐ ನವರು ಗ್ರಾಹಕನಿಗೆ ಬ್ಯಾಂಕ್ ಗಳಿಗೆ ತಿಳಿಯುವಂತೆ ಸುತ್ತೋಲೆ ಹೊರಡಿಸಬೇಕಿದೆ. ಅದನ್ನು ಪಾಲಿಸದ ಬ್ಯಾಂಕ್, ಹಣಕಾಸು ಸಂಸ್ಥೆಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು.
ಇಲ್ಲವಾದಲ್ಲಿ ಗ್ರಾಹಕನ ಪಾಡು ಕೇಳೋರು ಯಾರೂ ಇಲ್ಲದಂತಾಗುವುದು. ದುಡಿಮೆ ಇಲ್ಲದೆ ಇರುವ ಸಂದರ್ಭದಲ್ಲಿ ತನ್ನ ಆಪತ್ತಿನ ಕಾಲಕ್ಕೆ ಉಳಿತಾಯ ಹಣಗಳು ಇಲ್ಲದಂತಾಗಿ ದಿವಾಳಿಯಾಗುವ ಸಂದರ್ಭದಂತಾಗುವುದು ಖಂಡಿತ.
ಈ ಬಗ್ಗೆ ಸರಕಾರ ,ಮಾನ್ಯ ಮುಖ್ಯ ಮಂತ್ರಿ ಗಳು,ಸಚಿವರು,ವಿರೋಧ ಪಕ್ಷದ ನಾಯಕರು,ಸಂಬಂಧಪಟ್ಟ ಅಧಿಕಾರಿಗಳು ಗಮನಹಿರಿಸಿ ಗ್ರಾಹಕ ಸ್ನೇಹಿ ನಡುವಳಿಗಳು ಬಹುಬೇಗನೆ ತರುವಂತೆ ಮಾಡಬೇಕಿದೆ.
-ಸಿ.ಬಿ.ಗೂಳರಡ್ಡಿ.ವಕೀಲರು ಗದಗ