ಮುಕ್ಕೂರು :ಕಾಪು ಶೈಲೇಶ್ ರೈ ಸ್ಮರಣಾರ್ಥ ಕುಟುಂಬದಿಂದ ಹಾಗೂ ಯುವಸೇನೆಯಿಂದ 20 ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

ಮುಕ್ಕೂರು : ಇರುಬೈಲು ಕೆಳಗಿನ ಬಾರಿಕೆ ದಿ. ಶೈಲೇಶ್ ಕುಮಾರ್ ರೈ ಕಾಪು ಅವರ ಸ್ಮರಣಾರ್ಥ ಅವರ ಮನೆಯವರು ಹಾಗೂ ಯುವಸೇನೆ ಮುಕ್ಕೂರು ಇದರ ಜಂಟಿ ಆಶ್ರಯದಲ್ಲಿ 20 ಕುಟುಂಬಗಳಿಗೆ ಅಗತ್ಯ ವಸ್ತುಗಳ ಆಹಾರ ಸಾಮಗ್ರಿ ಕಿಟ್ ವಿತರಣೆ ಕಾರ್ಯ ಕಾಪು ನಿವಾಸದಲ್ಲಿ‌ ಎ.10 ರಂದು‌ ನಡೆಯಿತು.

ಸಂತೋಷ್ ಕುಮಾರ್ ರೈ ಕಾಪು, ಸಂದೀಪ್ ಕುಮಾರ್ ರೈ ಕಾಪು, ಸುದೀರ್ ರೈ ಕಾಪು, ಚೇತನಾ ರೈ, ಚಂದ್ರಕಲಾ ಎಸ್ ರೈ ಹಾಗೂ ಮುಕ್ಕೂರು ಯುವಸೇನೆ ಪದಾಧಿಕಾರಿಗಳು ಎಂಟು‌ ಬಗೆಯ ಆಹಾರ ಕಿಟ್ ಗೆ ಪ್ರಾಯೋಜಕತ್ವ ನೀಡಿದರು.

ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಪೆರುವಾಜೆ ಗ್ರಾ.ಪಂ.ಸದಸ್ಯ ಉಮೇಶ್ ಕೆಎಂಬಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಅವರು ಕಾರ್ಯಕ್ರಮದ ಕುರಿತು ಪ್ರಸ್ತಾವನೆಗೈದರು.

ಕಾಪು ಕುಟುಂಬದ ಪರವಾಗಿ ಚಂದ್ರಕಲಾ ಎಸ್ ರೈ ಹಾಗೂ ಯುವಸೇನೆಯ ಸಚಿನ್ ರೈ ಪೂವಾಜೆ, ನವೀನ್ ಶೆಟ್ಟಿ ಬರಮೇಲು ಅವರು ಫಲಾನುಭವಿಗಳಿಗೆ ಕಿಟ್ ವಿತರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾಪು ಕುಟುಂಬಸ್ಥರು, ಯುವಸೇನೆಯ ಸಂದೀಪ್ ಕುಂಜಾಡಿ, ಧನಂಜಯ ನೀರ್ಕಜೆ, ಪ್ರಶಾಂತ್ ಬೊಮ್ಮೆಮಾರ್, ಪವನ್‌ ನೀರ್ಕಜೆ, ಗುರು ಪ್ರಸಾದ್ ಬೊಮ್ಮೆಮಾರ್, ಆಶೋಕ್ ರೈ ಪೂವಾಜೆ, ಭರತ್ ರೈ, ಶರತ್ ನೀರ್ಕಜೆ, ಸನತ್ ಪಡ್ಪಿಲೆ, ಚರಣ್, ನಾರಾಯಣ ಕೊಂಡೆಪ್ಪಾಡಿ,ನಿತಿನ್ ಕಾನಾವು ಹಾಗೂ ವಿವಿಧ ಸಂಘ‌ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕುಶಾಲಪ್ಪ ಗೌಡ ಪೆರುವಾಜೆ ವಂದಿಸಿದರು.

Leave A Reply

Your email address will not be published.