Breaking News | ಕರ್ನಾಟಕದಲ್ಲಿ ಇನ್ನು 15 ದಿನ ಲಾಕ್ಡೌನ್ ಮುಂದುವರಿಕೆ | ಮುಖ್ಯಮಂತ್ರಿ ಯಡಿಯೂರಪ್ಪ ಇಂಗಿತ

ಇನ್ನೂ ಹದಿನೈದು ದಿನಗಳ ಕಾಲ ಲಾಕ್ಡೌನ್ ಮುಂದುವರಿಕೆಯಾಗುತ್ತದೆ. ಇದು ಕರ್ನಾಟಕ ರಾಜ್ಯದ ನಿರ್ಧಾರವಾಗಿದ್ದು ಇದಕ್ಕೆ ಕೇಂದ್ರದ ಅಧಿಕೃತ ಮುದ್ರೆ ಒಂದೇ ಬಾಕಿ ಉಳಿದಿರುವುದು.

ಕರ್ನಾಟಕದಲ್ಲಿ ಲಾಕ್ಡೌನ್ ಸಡಿಲಿಸುವ ಅಥವಾ ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಸಚಿವ ಸಂಪುಟದ ಸಭೆ ಈಗ ತಾನೇ ಮುಕ್ತಾಯವಾಗಿತ್ತು.

ಡಾಕ್ಟರ ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರು ಲಾಕ್ ಡೌನ್ಲೋಡ್ ಮುಂದುವರಿಸಬೇಕು ಅಥವಾ ಸಲ್ಲಿಸಬೇಕು ಎಂಬ ವಿಚಾರದ ಬಗ್ಗೆ ನಿನ್ನೆ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಅಲ್ಲದೆ ಎಲ್ಲಾ ಸಚಿವರ, ಶಾಸಕರುಗಳ, ಜಿಲ್ಲಾಧಿಕಾರಿಗಳ ಮತ್ತು ಇತರ ತಜ್ಞರ ಸಲಹೆಗಳನ್ನು ಕೂಡ ಸರಕಾರ ಪಡೆದಿತ್ತು. ಈಗ ಕರ್ನಾಟಕದಲ್ಲಿ ಲಾಕ್ಡೌನ್ ಮುಂದುವರಿಕೆ ಮಾಡಲು ಇಚ್ಚಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿದ್ದಾರೆ.

ಇನ್ನೂ ಹದಿನೈದು ದಿನಗಳ ಕಾಲ ಲಾಕ್ಡೌನ್ ಮುಂದುವರಿಕೆಯಾಗುತ್ತದೆ. ಇದು ರಾಜ್ಯದ ನಿರ್ಧಾರವಾಗಿದ್ದು ಈ ನಿರ್ಧಾರವನ್ನು ಕೇಂದ್ರಕ್ಕೆ ಸಲ್ಲಿಸಲಿದೆ. ಕೇಂದ್ರದ ಮತ್ತು ಪ್ರಧಾನಮಂತ್ರಿಯವರ ಅಭಿಪ್ರಾಯದ ಮೇರೆಗೆ ಏಪ್ರಿಲ್ 11 ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದಾರೆ. ಏಪ್ರಿಲ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಿದ್ದಾರೆ. ಆನಂತರ ಪ್ರಧಾನಿಯವರು ಅಂತಿಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

ಕೆಲ ದಿನಗಳ ಹಿಂದೆ ಪ್ರಧಾನಿಯವರು, ಲಾಕ್ಡೌನ್ ಮುಂದುವರಿಸುವ ಅಥವಾ ಸಡಿಲಿಸುವ ನಿರ್ಧಾರವನ್ನು ಆಯಾ ರಾಜ್ಯಗಳಿಗೆ ಬಿಡಲಾಗುತ್ತದೆ ಎಂದಿದ್ದರು. ಆದುದರಿಂದ ಕರ್ನಾಟಕದ ಎಲ್ಲಾ ತಜ್ಞರ,ಸಚಿವರ ಅಭಿಪ್ರಾಯದ ಮೇರೆಗೆ ಇನ್ನು 15 ದಿನಗಳ ಕಾಲ ಅಂದರೆ ಏಪ್ರಿಲ್ 30 ರವರೆಗೆ ಲಾಕ್ ಡೌನ್ ವಿಸ್ತರಣೆ ಆಗುವುದು ಶತಃಸಿದ್ಧ. ಆದರೆ ವಿಸರ್ಜಿಸಲ್ಪಡುವ ಲಾಕ್ಡೌನ್ ನಲ್ಲಿ ಯಾವುದಾದರೂ ರಿಯಾಯಿತಿ ಇದೆಯಾ ಅಥವಾ ಇನ್ನಷ್ಟು ಕಠಿಣ ಲಾಕ್ ಡೌನ್ ಗೆ ನಾವುಗಳು ಒಳಗಾಗ ಬೇಕಾಗುತ್ತದೆಯಾ ಅನ್ನುವುದು ಏಪ್ರಿಲ್ 11ರಂದು ತಿಳಿದು ಬರಲಿದೆ.

Leave A Reply

Your email address will not be published.