ತವರು ಮನೆ ಸೇರಲು 18 ತಿಂಗಳ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಬರೋಬ್ಬರಿ 100 ಕಿಲೋಮೀಟರ್ ನಡೆದಳು !

ಗುವಾಹಟಿ : ಕೊರೋನಾ ವ್ಯಾಧಿಯ ಪರಿಣಾಮದಿಂದಾಗಿ ಅಸ್ಸಾಂನ 25 ವರ್ಷದ ಮಹಿಳೆಯೊಬ್ಬರು 18 ತಿಂಗಳ ಮಗುವನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು ಬರೋಬ್ಬರಿ 100 ಕಿಲೋ ಮೀಟರ್ ದೂರ ನಡೆದಿರುವ ಘಟನೆ ನಡೆದಿದೆ.

ವಿಧವೆ ಮಹಿಳೆ ಅಂಜನಾ ಗೊಗೋಯ್ ಗೋಲಾಘಾಟ್ ಜಿಲ್ಲೆಯ ಸರುಪಾಥರ್ ಗ್ರಾಮದ ತನ್ನ ಅತ್ತೆಯ ಮನೆಯಲ್ಲಿದ್ದಳು. ಅತ್ತೆ ಮನೆಯಲ್ಲಿ ತನ್ನನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಅನಿವಾರ್ಯವಾಗಿ ಆಕೆ ತನ್ನ ತವರು ಮನೆಗೆ ಹೊರಟಿದ್ದಾಳೆ.

ಆದರೆ ತವರು ಮನೆ ಏನಾದ್ರೂ ಹತ್ತಿರ ಇದೆಯಾ ? ಆಕೆಯ ತವರು ಮನೆ ಅತ್ತೆಯ ಮನೆಯಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿದೆ.

ಅಲ್ಲಿಂದ ತನ್ನ ತವರು ಮನೆ ಇರುವ ಜೋರ್ಹತ್ ಜಿಲ್ಲೆಯ ಲಾಹಿಂಗ್ ಪೇಟೆಗೆ ಆಕೆಗೆ ಹೋಗಬೇಕು. ಲಾಕ್ ಡೌನ್ ಹಿನ್ನೆಲೆಯಲ್ಲಿ ಆಕೆಗೆ ಯಾವುದೇ ವಾಹನ ಸಿಕ್ಕಿಲ್ಲ. ಆದುದರಿಂದ ಆಕೆ ಕಾಲ್ನಡಿಗೆಯಲ್ಲಿಯೇ ಪ್ರಯಾಣ ಶುರುಮಾಡಿದ್ದಾಳೆ. 8 ದಿನಗಳಲ್ಲಿ 100 ಕಿಲೋಮೀಟರ್ ದೂರ ಸೊಂಟದಲ್ಲಿ ತನ್ನ ಹದಿನೆಂಟು ತಿಂಗಳ ಕೂಸನ್ನು ಜೋತು ಹಾಕಿಕೊಂಡು ಬಿರು ಬಿಸಿಲಿನಲ್ಲೂ ನಿರಂತರ ನಡೆದಿದ್ದಾಳೆ.

8 ದಿನಗಳ ನಡಿಗೆಯ ನಂತರ ಒಂಬತ್ತನೇ ದಿನ ಮಹಿಳೆಯನ್ನು ಪೊಲೀಸರು ಗುರುತಿಸಿದ್ದಾರೆ. ನಂತರ ಅವರ ಆರೋಗ್ಯ ತಪಾಸಣೆ ನಡೆಸಿ ಆಹಾರ ನೀಡಿ, ಮನೆಗೆ ಇಲಾಖಾ ವಾಹನದಲ್ಲಿ ಅವರ ಮನೆಗೆ ಮಾಡಿದ್ದಾರೆ. ಒಂದೂವರೆ ವರ್ಷದ ಹಿಂದೆ ತಮ್ಮ ಪತಿ ತೀರಿಹೋಗಿದ್ದು, ಅತ್ತೆ ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳದ ಕಾರಣ ತಂದೆ ತಾಯಿಗಳ ಮನೆಗೆ ಹೋಗುತ್ತಿದ್ದಾಗಿ ಆ ಮಹಿಳೆ ಹೇಳಿದ್ದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Leave A Reply

Your email address will not be published.