ತಮಿಳುನಾಡಿನಿಂದ ಕಡಬ ತಾ.ನ ಐತ್ತೂರಿಗೆ ಬಂದ ಕುಟುಂಬ | ಆತಂಕದಲ್ಲಿ‌ ಜನತೆ

ಕಡಬ : ತಮಿಳುನಾಡಿನಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು,ಇಂತಹ ವಿಷಮ ಸ್ಥಿತಿಯಲ್ಲಿ ತಮಿಳುನಾಡಿನಿಂದ ಕರ್ನಾಟಕದ ದ.ಕ.ಜಿಲ್ಲೆಯ ಕಡಬ ತಾಲೂಕಿಗೆ ಕುಟುಂಬವೊಂದು ಆಗಮಿಸಿದ್ದು ಪಕ್ಕದ ಜನರ ಆತಂಕ ಕ್ಕೆ ಕಾರಣವಾಗಿದೆ.

ತಮಿಳುನಾಡಿನಿಂದ ಕಡಬ ತಾಲೂಕಿನ ( ಮರ್ದಾಳ) ಐತೂರು ಗ್ರಾಮದ ಓಟಕಜೆ ಸಿ ಆರ್ ಸಿ ಗೆ ನಾಲ್ವರು (ತಂದೆ, ತಾಯಿ ಮತ್ತು 2 ಮಕ್ಕಳಿರುವ ಕುಟುಂಬವೊಂದು ಎ.9 ರಂದು ಬೈಕಿನಲ್ಲಿ ಬಂದಿದ್ದು, ಓಟೆಕಜೆ ಕಾಲನಿಯ ಜನತೆಗೆ ಆತಂಕ ಶುರುವಾಗಿದೆ.

40 ಕುಟುಂಬಗಳು ಈ ಕಾಲನಿಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲಲ್ಲಿ ಗಡಿ ತಪಾಸಣೆ ಇದ್ದರೂ ಇವರು ಹೇಗೆ ಬಂದರು ಎಂಬುದೇ ಯಕ್ಷ ಪ್ರಶ್ನೆ.ಅಲ್ಲದೆ ಬೈಕ್ ಗೆ ಮೆಡಿಕಲ್ ಎಮರ್ಜೆನ್ಸಿ ಎಂಬ ಸ್ಟಿಕ್ಕರ್ ಹಾಕಲಾಗಿದೆ.

ಈ ಕುರಿತು ಈಗಾಗಲೇ ಐತ್ತೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಕೆ ಅವರು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ಈಗಾಗಲೇ ಪಕ್ಕದ ಕಾಸರಗೋಡಿನಿಂದ ಬಂದವರು, ದುಬೈನಿಂದ ಬಂದವರು ಮತ್ತು ನಿಜಾಮುದ್ದಿನ್ ಮಸೀದಿಗೆ ಹೋಗಿ ಬಂದವರು ನಮ್ಮ ಹೆಗಲ ಮೇಲೆ ಹೊರಲಾರದ ಭಾರ ಇಳಿಸಿ ಹೋಗಿದ್ದಾರೆ. ಮತ್ತಷ್ಟು ಹೊರುವ ಸಾಮರ್ಥ್ಯ ನಮ್ಮಲ್ಲಿಲ್ಲ.

Leave A Reply

Your email address will not be published.