ಕುದ್ಮಾರು | ರಸ್ತೆ ಕಾಮಗಾರಿ ಅರ್ಧಕ್ಕೆ, ಮನೆಯಂಗಳಕ್ಕೆ ನೀರು | ಅಧಿಕಾರಿಗಳ ಭೇಟಿ
ಸವಣೂರು : ಅಭಿವೃದ್ಧಿಗೊಳ್ಳುತ್ತಿರುವ ಕುದ್ಮಾರು -ಶಾಂತಿಮೊಗೇರು ರಸ್ತೆಯ ಬದಿಯಲ್ಲಿರುವ ಎರಡು ಮನೆಯಂಗಳಕ್ಕೆ . ಮಂಗಳವಾರ ಸಂಜೆ ಭಾರೀ ಮಳೆಯ ಹಿನ್ನೆಯಲ್ಲಿ ಅಪಾರ ಪ್ರಮಾಣದ ಮಣ್ಣು ಮಿಶ್ರಿತ ಮಳೆ ನೀರು ಹತ್ತಿರ ಮನೆಗೆ ನುಗ್ಗಿ ಸಮಸ್ಯೆ ತಲೆದೋರಿದೆ.
ಕೊರೋನ ಮಹಾಮಾರಿಯ ಹಿನ್ನೆಲೆಯಲ್ಲಿ ದೇಶವೇ ಲಾಕ್ ಡೌನ್ ಆದ ಕಾರಣ ಎಲ್ಲಾ ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕುದ್ಮಾರು ರಸ್ತೆ ಕಾಮಾಆಗರಿ ಕೂಡಾ ಅರ್ಧದಲ್ಲೇ ಬಾಕಿಯಾಗಿತ್ತು. ಶಾಂತಿಮುಗೇರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮುನ್ನ ರಸ್ತೆ ಕಾಮಗಾರಿ ಮುಗಿಸಿಕೊಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು, ಕಾಮಗಾರಿ ಮಾತ್ರ ಮುಗಿದಿರಲಿಲ್ಲ.
ಇದೀಗ ರಸ್ತೆ ಅಗಲೀಕರಣದ ಮಣ್ಣಿನ ರಾಶಿ ಕೂರ ಸಮೀಪದ ಎರಡು ಮನೆಯಂಗಳಕ್ಕೆ ಹರಿದು ಹೋಗಿ ಎರಡೂ ಮನೆಯವರು ಹೊರ ನಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬುಧವಾರ ಸ್ಥಳಕ್ಕೆ ಭೇಟಿ ನೀಡಿರುವ ಲೋಕೋಪಯೋಗಿ ಇಲಾಖಾ ಎಇಇ ರಾಜರಾಂ ಹಾಗೂ ಇಂಜೀನಿಯರ್ ಎಲ್.ಸಿ. ಸಿಕ್ವೇರಾ ತಕ್ಷಣ ಸ್ಪಂದಿಸಿ ಜೆಸಿಬಿ ತರಿಸಿ ಮನೆಯಂಗಳದ ಮಣ್ಣು ತೆರವು ಕಾರ್ಯ ನಡೆಸಿದರು.