ಪುತ್ತೂರಿನಲ್ಲಿ ವಾರದಲ್ಲಿ ಒಂದು ದಿನ ಅಡಿಕೆ ಮತ್ತು ಕೊಕ್ಕೊ ಮಾರಾಟಕ್ಕೆ ವ್ಯವಸ್ಥೆ | ಶಾಸಕ ಸಂಜೀವ ಮಠಂದೂರು

Share the Article

ಅಡಿಕೆ ಮತ್ತು ಕೊಕ್ಕೊ ಬೆಳೆಗಾರರು ವಾರದಲ್ಲಿ ತಲಾ ಒಂದು ದಿನ ತಮ್ಮ ಮನೆ ಸಮೀಪದ ಕ್ಯಾಂಪ್ಕೋ ಖರೀದಿ ಕೇಂದ್ರಕ್ಕೆ ಹೋಗಿ ಬೆಳಿಗ್ಗೆ 8.00 ರಿಂದ ಮಧ್ಯಾಹ್ನ 12ರ ಒಳಗೆ ತಮ್ಮ ಗುರುತಿನ ಚೀಟಿ, ಆರ್.ಟಿ.ಸಿ. ಪಹಣಿ ಪತ್ರ ಅಥವಾ ಕ್ಯಾಂಪ್ಕೋ ಗುರುತಿನ ಕಾರ್ಡ್ ತೋರಿಸಿ ಮಾರಾಟ ಮಾಡಬಹುದು.

ರೈತರು ವಾರಕ್ಕೆ ಗರಿಷ್ಠ 1ಕಿಂಟ್ವಾಲ್ ಅಥವಾ ರೂ. 25,000/- ಮೌಲ್ಯದ ಅಡಿಕೆಯನ್ನು ಕ್ಯಾಂಪ್ಕೋ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಬಹುದು.
ಅಡಿಕೆ ಬೆಳೆಗಾರರು ಯಾವುದೇ ಸಂದರ್ಭದಲ್ಲಿ ಅಗತ್ಯಕ್ಕಿಂತ ಹೆಚ್ಚು ಮಾರಾಟ ಮಾಡದೇ, ತುರ್ತು ಅಗತ್ಯಕ್ಕೆ ಮಾತ್ರ ಮಾರಾಟ ಮಾಡಬೇಕು.

ಮಾರುಕಟ್ಟೆ ದರದಲ್ಲಿ ಸ್ಥಿರತೆ ಇಲ್ಲದೇ ಇರುವುದರಿಂದ, ವಾರ ಪೂರ್ತಿ ತೆರೆದಿರುವ ಎಪಿಎಂಸಿಯಲ್ಲಿ ಅಡಿಕೆ ಅಡವು ಇಟ್ಟು ಮುಂಗಡ ಹಣ ಪಡೆಯಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ.

ರೈತರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಮಾನ್ಯ ಶಾಸಕರಾದ
ಶ್ರೀ ಸಂಜೀವ ಮಠಂದೂರು ಇವರು ಕೃಷಿಕರಲ್ಲಿ ವಿನಂತಿಸಿರುತ್ತಾರೆ.

Leave A Reply