ಪೆರುವಾಜೆ ಮುಕ್ಕೂರು | 10 ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

ಬೆಳ್ಳಾರೆ : ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ದಾನಿಗಳ‌ ನೆರವಿನೊಂದಿಗ 10 ಕುಟುಂಬಗಳಿಗೆ 12 ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ಎ. 7 ರಂದು ವಿತರಿಸಲಾಯಿತು.

ಪೆರುವಾಜೆ ಗ್ರಾಮದ ಮುಕ್ಕೂರು, ಕುಂಡಡ್ಕ, ಕಾನಾವು ಆಸುಪಾಸಿನ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳನ್ನು ಗುರುತಿಸಿ ದಾನಿಗಳ ಸಹಕಾರದಿಂದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ವಿತರಿಸಲಾಯಿತು.

ಯತೀಶ ಕಾನಾವು ಜಾಲು, ಗೋಪಾಲಕೃಷ್ಣ ಭಟ್ ಕಾನಾವು, ರಾಮಚಂದ್ರ ಕೋಡಿಬೈಲು, ಮಹೇಶ್ ಕುಂಡಡ್ಕ ಕುವೈತ್, ಜಯಪ್ರಕಾಶ್ ರೈ ಕನ್ನೆಜಾಲು, ಕುಂಬ್ರ ದಯಾಕರ ಆಳ್ವ, ನಿವೃತ್ತ ಶಿಕ್ಷಕ ಬಾಬು ಎನ್, ಜಗನ್ನಾಥ ಪೂಜಾರಿ ಮುಕ್ಕೂರು , ರಾಮಚಂದ್ರ ಬಿ, ರಮೇಶ್ ಕಾನಾವು, ಕುಸುಮಾಧರ ಪೂಜಾರಿ ಅಡ್ಯತಕಂಡ , ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ಪ್ರಸಾದ್ ಎನ್ ಕುಂಡಡ್ಕ, ರಮೇಶ್ ಪೂಜಾರಿ ಮುಕ್ಕೂರು ಹಾಗೂ ನೇಸರ ಯುವಕ ಮಂಡಲ, ಸಾವರ್ಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಅಗತ್ಯ ವಸ್ತುಗಳ ಖರೀದಿಗೆ ದೇಣಿಗೆ‌ ನೀಡಿದರು. ವಿತರಣೆ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಸಹಕಾರ ನೀಡಿದರು.

Leave A Reply

Your email address will not be published.