ವಿದ್ಯಾಮಾತ ಫೌಂಡೇಶನ್ ವತಿಯಿಂದ ಪುತ್ತೂರು ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ಠಾಣೆಗಳು ಮತ್ತು ವಿಟ್ಲ ಪೊಲೀಸ್ ಠಾಣೆ, ಗ್ರಾಮ ಪಂಚಾಯಿತಿ, ಪ್ರೆಸ್ ಕ್ಲಬ್ ಗಳಿಗೆ ಮಾಸ್ಕ್ ವಿತರಣೆ

ಪುತ್ತೂರು ಪೊಲೀಸ್ ಉಪ ವಿಭಾಗ ವ್ಯಾಪ್ತಿಯ ಪುತ್ತೂರು ನಗರ ಠಾಣೆ, ಸಂಚಾರ ಪೊಲೀಸ್ ಠಾಣೆ, ಮಹಿಳಾ ಠಾಣೆ, ಉಪ ವಿಭಾಗ ಅಧಿಕಾರಿಗಳ ಕಚೇರಿ, ಸಂಪ್ಯ, ಬೆಳ್ಳಾರೆ, ಉಪ್ಪಿನಂಗಡಿ, ಸುಳ್ಯ, ಕಡಬ ಠಾಣೆಗಳಿಗೆ ಹಾಗೂ ವಿಟ್ಲ ಠಾಣೆ ಮತ್ತು ಪುತ್ತೂರು ಪ್ರೆಸ್ ಕ್ಲಬ್, ಕೆಯ್ಯುರೂ, ಇಡ್ಕಿದು, ವಿಟ್ಲ ಮುಡ್ನೂರು, ಪೆರಾಬೆ ಗ್ರಾಮ ಪಂಚಾಯಿತಿ ಹಾಗೂ ಸೇವಾ ಸಹಕಾರಿ ಸಂಘಗಳಿಗೆ ಮಾಸ್ಕ್ ಮತ್ತು ಡೇಟಾಲ್-ಹ್ಯಾಂಡ್ ವಾಷ್ ಗಳನ್ನು ವಿತರಿಸಲಾಯಿತು.

ಕೋರೋನಾ ಮಹಾಮಾರಿಯ ವಿರುದ್ಧ ಹಗಲು ರಾತ್ರಿ ಎನ್ನದೇ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಹಾಗೂ ಆರೋಗ್ಯ ಮಾಧ್ಯಮ ಸಿಬ್ಬಂದಿಗಳ ಸುರಕ್ಷತೆಗಾಗಿ ಮಾಸ್ಕ್ ವಿತರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಈ ಸಂದರ್ಭದಲ್ಲಿ ವಿದ್ಯಾಮಾತ ಫೌಂಡೇಶನ್ ಅಧ್ಯಕ್ಷ ಭಾಗ್ಯೇಶ್ ರೈ ತಿಳಿಸಿದರು.

ಈ ಉತ್ತಮ ಕಾರ್ಯಕ್ಕೆ ಪುತ್ತೂರು ಪೊಲೀಸ್ ಉಪ ವಿಭಾಗಾಧಿಕಾರಿ ದಿನಕರ್ ಶೆಟ್ಟಿಯವರು ಶ್ಲಾಘಿಸಿ ಚಾಲನೆ ನೀಡಿದರು. ವಿದ್ಯಾ ಮಾತಾ ಫೌಂಡೇಶನ್ ನ ಕಾರ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಅಳಕೆಮಜಲುರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.