ಪುತ್ತೂರು | ಒಟಿಪಿ ಇಲ್ಲದೆ ಸಮರ್ಪಕ ಪಡಿತರ ವಿತರಣೆ, ಜತೆಗೆ ಅಧಿಕಾರಿಗಳ ನೇಮಕ

ಪುತ್ತೂರು : ಜಿಲ್ಲೆಯಲ್ಲಿ ಕೋರೋಣ ವೈರಸ್  ಸೋಂಕಿನ ಹಿನ್ನಲೆಯಲ್ಲಿ ಏಪ್ರಿಲ್ ತಿಂಗಳ ಪಡಿತರವನ್ನು ಒಟಿಪಿ ಇಲ್ಲದೆಯೂ ಕೇವಲ ಗ್ರಾಹಕರ ಸಹಿ ಪಡೆದು ಹಂಚಲು ಸರಕಾರ ಇದೀಗ ಆದೇಶಿಸಿದೆ.

ಓಟಿಪಿಗಾಗಿ ಜನರು ಬಿಸಿಲಿನಲ್ಲಿ ಕ್ಯೂ ನಿಲ್ಲಬೇಕಾಗಿತ್ತು ಮತ್ತು ಅದರಿಂದ ಹೆಚ್ಚಿನ ಜನಜಂಗುಳಿ ಸೇರುತ್ತಿತ್ತು.ಇದಕ್ಕಾಗಿ ಎ.ಸಿ.ಡಾ.ಯತೀಶ್ ಉಳ್ಳಾಲ ಅವರ ನೇತೃತ್ವದಲ್ಲಿ, ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ವಿತರಣೆಯಾಗುವಂತೆ ನೋಡಿಕೊಳ್ಳಲು ಪಡಿತರ ವ್ಯವಸ್ಥೆಯ ನೋಡೆಲ್ ಅಧಿಕಾರಿಗಳನ್ನಾಗಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಅಥವಾ ಗ್ರಾಮಕರಣಿಕರನ್ನು ನೇಮಕ ಮಾಡಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ವಿತರಣೆ ಮಾಡುವಂತೆ ಮತ್ತು ನಿಜವಾದ ಪಡಿತರದಾರರಿಗೆ ಪಡಿತರ ವಿತರಣೆ ಮಾಡಿ ಪ್ರತಿ ದಿನ ವರದಿ ಸಲ್ಲಿಸುವಂತೆ ತಹಸಿಲ್ದಾರ್ ಅವರು ನೋಡೆಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

.

Leave A Reply

Your email address will not be published.