ಪುತ್ತೂರು | ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಿಗೆ ಬೆದರಿಕೆ ಕರೆ

ಪುತ್ತೂರು : ಪುತ್ತೂರು ತಾಲೂಕು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಅಬ್ದುಲ್ ಕುಂಞ ಪಟ್ಟೆ ಇವರಿಗೆ ವಿದೇಶದಿಂದ ಬೆದರಿಕೆ ಕರೆ ಬಂದಿದೆ.

ಈ ಬಗ್ಗೆ ಅವರು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿನ್ನೆ ಸಂಜೆ ವಿದೇಶದಿಂದ ಕರೆ ಮಾಡಿದ ವ್ಯಕ್ತಿ ಏಕಾಏಕಿ ಅಬ್ದುಲ್ ಕುಂಞ ಅವರಿಗೆ ಪೆದಂಬು ಮಾತನಾಡಲು ಪ್ರಾರಂಭಿಸಿದ್ದ.” ಬನ್ನಿ ಸಮಾಧಾನದಿಂದ ಮಾತನಾಡಿ. ಎಲ್ಲಾ ಮಾತನಾಡೋಣ” ಎಂದು ಅದೆಷ್ಟು ಸಮಾಧಾನದಿಂದ ಮಾತನಾಡಲು ಪ್ರಯತ್ನಿಸಿದರೂ ಎದುರಿನ ವ್ಯಕ್ತಿ ಕೇಳಿಕೊಳ್ಳಲು ಸಿದ್ಧನಿರಲಿಲ್ಲ. ಕೊನೆಗೆ ಅಬ್ದುಲ್ ಕುಂಞ ಅವರು ” ನಿಮಗೇನು ಬೇಕು, ಏನು ಬೇಕು ನಿಮಗೆ ?” ಎಂದು ಪ್ರಶ್ನಿಸಿದ್ದಾರೆ.

ಪುತ್ತೂರು ಪುತ್ತೂರು ತಾಲೂಕು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಅಬ್ದುಲ್ ಕುಂಞ ಪಟ್ಟೆ ಇವರಿಗೆ ವಿದೇಶದಿಂದ ಬೆದರಿಕೆ ಕರೆ ಬಂದಿದೆ.

ಈ ಬಗ್ಗೆ ಅವರು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿನ್ನೆ ಸಂಜೆ ವಿದೇಶದಿಂದ ಕರೆ ಮಾಡಿದ ವ್ಯಕ್ತಿ ಏಕಾಏಕಿ ಅಬ್ದುಲ್ ಕುಂಞ ಅವರಿಗೆ ಪೆದಂಬು ಮಾತನಾಡಲು ಪ್ರಾರಂಭಿಸಿದ್ದ.” ಬನ್ನಿ ಸಮಾಧಾನದಿಂದ ಮಾತನಾಡಿ. ಎಲ್ಲಾ ಮಾತನಾಡೋಣ” ಎಂದು ಅದೆಷ್ಟು ಸಮಾಧಾನದಿಂದ ಮಾತನಾಡಲು ಪ್ರಯತ್ನಿಸಿದರೂ ಎದುರಿನ ವ್ಯಕ್ತಿ ಕೇಳಿಕೊಳ್ಳಲು ಸಿದ್ಧನಿರಲಿಲ್ಲ.

ಕೊನೆಗೆ ಅಬ್ದುಲ್ ಕುಂಞ ಅವರು ” ನಿಮಗೇನು ಬೇಕು, ಯಾರು ನೀವು ?” ಎಂದು ಪ್ರಶ್ನಿಸಿದ್ದಾರೆ.
” ಆರು ಕೋಟಿ ಜನರಿಗೆ ನಿಮ್ಮ ಕೊಡುಗೆ ಏನು ? ಏನು ಮಾಡುತ್ತಿದೆ ನಿಮ್ಮ ಸರಕಾರ, ನಿಮ್ಮ ಮೋದಿ ಏನು ಮಾಡುತ್ತಿದ್ದಾರೆ? ನಿನ್ನ ಬಗ್ಗೆ ನನಗೆಲ್ಲಾ ಗೊತ್ತಿದೆ ” ಎಂದು ಹೇಳಿ ಅವಾಚ್ಯವಾಗಿ ನಿಂದಿಸಿದ್ದಾನೆ.
” ನೀನು ಸರಿಯಾಗಿರಬೇಕು ಇಲ್ಲದೇ ಹೋದರೆ ನಿನ್ನನ್ನು ಸರಿಯಾಗಿ ವಿಚಾರಿಸಿಕೊಳ್ಳುತ್ತೇನೆ. ನನಗೆ ಏನು ಮಾಡಬೇಕೆಂದು ಗೊತ್ತಿದೆ ” ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಬ್ದುಲ್ ಅವರು ತಿಳಿಸಿದ್ದಾರೆ.

ಅಬ್ದುಲ್ ಕುಂಞ ಅವರಿಗೆ ಈಗಾಗಲೇ ಕೆಲವರ ಮೇಲೆ ಸಂಶಯವಿದ್ದು ಆ ವ್ಯಕ್ತಿ  ಮುಂಡೂರು ಕುರಿಯ ಭಾಗದವನೆಂದು ಎಂದು ಹೇಳಲಾಗುತ್ತಿದೆ. ಸ್ವತಹ ಅಬ್ದುಲ್ ಕುಂಞ ಪತ್ತೆ ಅವರೇ ಈ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ನಿನ್ನೆ ಮೊನ್ನೆಯವರೆಗೆ ಹಿಂದೂ ನಾಯಕರುಗಳಿಗೆ ಬೆದರಿಕೆ ಕರೆ ಬರುತ್ತಿತ್ತು. ಇವಾಗ ಆಡಳಿತ ಪಕ್ಷ ಬಿಜೆಪಿಯ ನಾಯಕರುಗಳಿಗೂ ಬೆದರಿಕೆ ಕರೆಗಳು ಬರುತ್ತಿರುವ ಘಟನೆಗಳ ಹಿಂದಿನ ಮರ್ಮವೇನು ಎಂಬುದೇ ಪ್ರಶ್ನೆಯಾಗಿದೆ.

Leave A Reply

Your email address will not be published.