ಸಂಸದ ನಳಿನ್ ಕುಮಾರ್ ಸುಳ್ಯಕ್ಕೆ ಭೇಟಿ | ಪ್ರಸ್ತುತ ಸನ್ನಿವೇಶಗಳ ಕುರಿತು ಮಾಹಿತಿ ಸಂಗ್ರಹ
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸುಳ್ಯತಾಲೂಕಿನ ಪ್ರಸ್ತುತ ಸನ್ನಿವೇಶಗಳ ಕುರಿತು ಮಾಹಿತಿ ಸಂಗ್ರಹ ಮತ್ತು ಪರಿಶೀಲನಾ ಕಾರ್ಯಕ್ರಮ ಸಂಸದ ನಳಿನ್ ಕುಮಾರ್ ಕಟೀಲ್ ರವರಿಂದ ಏಪ್ರಿಲ್ 7 ರಂದು ನಡೆಯಿತು.
ಪ್ರಥಮವಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾಕ್ಟರ್ ಸುಬ್ರಹ್ಮಣ್ಯ ಅವರಿಂದ, ತಾಲೂಕಿನಲ್ಲಿ ಉಂಟಾಗಿರುವ ಕೋರೋಣ ವೈರಸ್ನ ಹಿನ್ನೆಲೆಯಲ್ಲಿ ಜ್ವರ ಇನ್ನಿತರ ಕಾಯಿಲೆಗಳಿಂದ ಪರೀಕ್ಷೆ ನಡೆಸಿದ ರೋಗಿಗಳ ಕುರಿತು ಮಾಹಿತಿಯನ್ನು ಪಡೆದುಕೊಂಡರು.
ಅಜ್ಜಾವರ ಒಬ್ಬ ವ್ಯಕ್ತಿಯಲ್ಲಿ ಕೊರೋಣ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಕುಟುಂಬಸ್ಥರು ಮತ್ತು ಇತರರ ಮಾಹಿತಿಯನ್ನು ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಸುಳ್ಯ ವೈದ್ಯಾಧಿಕಾರಿ ಡಾ. ಭಾನುಮತಿ, ಡಾಕ್ಟರ್ ಕರುಣಾಕರ ಮುಂತಾದವರು ಉಪಸ್ಥಿತರಿದ್ದರು.
ನಂತರ ಸುಳ್ಯ ಶಿವಕೃಪಕಲಾ ಮಂದಿರಕ್ಕೆ ಭೇಟಿ ನೀಡಿದ ಸಂಸದರು ಅಸಂಘಟಿತ ಕಾರ್ಮಿಕರಿಗೆ ವಿವಿಧ ಸಂಘಟನೆಗಳ ವತಿಯಿಂದ ನೀಡಲ್ಪಡುವ ಭೋಜನ ವ್ಯವಸ್ಥೆಯನ್ನು ಪರಿಶೀಲಿಸಿ ಸಂಘಟಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು ಸುಳ್ಯದ ವಿವಿಧ ಸಂಘಟನೆಗಳಿಂದ ಉತ್ತಮವಾದ ಕಾರ್ಯಕ್ರಮ ನಡೆಯುತ್ತಿದ್ದು ಬಗ್ಗೆ ಕಾಳಜಿವಹಿಸಿ ಉತ್ತಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಹಾಗೂ ಪಕ್ಷದ ವತಿಯಿಂದ ಯಾವುದೇ ರೀತಿಯ ಸಹಾಯಕ್ಕೆ ನಾವು ಸಿದ್ಧರಿದ್ದೇವೆ ನಿಮ್ಮೊಂದಿಗೆ ಕೈಜೋಡಿಸಲು ನಾವಿದ್ದೇವೆ ಎಂದು ಸ್ಫೂರ್ತಿ ತುಂಬಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ ,ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ,ಸುಳ್ಯ ನಗರ ಪಂಚಾಯತ್ ಸದಸ್ಯರಾದ ವಿನಯಕುಮಾರ ,ಸುರೇಶ್ ಕಣೆಮರಡ್ಕ ,ಮಹೇಶ್ ರೈ , ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ,ಕಾರ್ಮಿಕ ಸಂಘಟನೆಯ ಮುಖಂಡರುಗಳಾದ ಜೋನಿ ಕಲ್ಲುಗುಂಡಿ ,ನೆಲ್ಸನ್ ಹಳೆಗೇಟು ,ನಾಗರಾಜ್ ಮೇಸ್ತ್ರಿ ಜಯನಗರ ,ಬಿಜು ಮೇಸ್ತ್ರಿ, ಮೋನಪ್ಪ ಮೇಸ್ತ್ರಿಹಳೆಗೇಟು, ಶಿಲ್ಪ ಆಚಾರ್ಯ ,ಹನೀಫ್ ಜಯನಗರ, ಉಸ್ಮಾನ್ ಜಯನಗರ ,ಮಂಜು ಮೇಸ್ತ್ರಿ ,ನಾಗರಾಜ ಕಲ್ಲುಮುಟ್ಲು, ದುರ್ಗೇಶ್ ,ಗಣೇಶ, ವಿಜಯ, ಮಲ್ಲೇಶ್ ಬೆಟ್ಟಂಪಾಡಿ ,ಜಗದೀಶ್, ವೆಂಕಟೇಶ್ ,ಶ್ರೀಧರ ಕಲ್ಲುಗುಂಡಿ, ಶಿವರಾಮಗೌಡ ಕೇರ್ಪಳ, ಶಶಿ ಮೊದಲಾದವರು ಉಪಸ್ಥಿತರಿದ್ದರು.