ಕರಾಯದ ಕೋರೋನಾ ಸೋಂಕಿತ ವ್ಯಕ್ತಿಯ ಪೋಷಕರು ಸೇಫ್ !
ಕಳೆದ ಮಾರ್ಚ್ 24 ರಂದು ಕೋರೋನಾ ಪಾಸಿಟಿವ್ ಕರಾಯದಲ್ಲಿ ಕಳವಳ ಎಬ್ಬಿಸಿದ್ದ ದುಬೈ ರಿಟರ್ನ್ ವ್ಯಕ್ತಿಯ ತಂದೆ-ತಾಯಿ ಆರೋಗ್ಯವಂತರಾಗಿದ್ದಾರೆ.
ಆತನ ತಂದೆ-ತಾಯಿಯ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ಇದೀಗ ಅವರ ಮೆಡಿಕಲ್ ರಿಪೋರ್ಟ್ ಕೂಡ ನೆಗೆಟಎಂದು ಬಂದಿದ್ದು ಬಿಗುವಿನ ವಾತಾವರಣ ತುಂಬಿರುವ ಕರಾಯದ ಪರಿಸರದಲ್ಲಿ ಸಣ್ಣ ರಿಲೀಫ್.
ಈತ ಮಾ.21 ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದ ಕರಾಯದ ವ್ಯಕ್ತಿಗೆ ಆ ಕೂಡಲೇ ಆತನನ್ನು ಪರೀಕ್ಷೆಗೊಳಪಡಿಸಿ ಆತನಿಗೆ ಸ್ಟಾಂಪಿಂಗ್ ಹಾಕಿ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿರಲು ಸೂಚನೆ ನೀಡಲಾಗಿತ್ತು. ನಂತರ ಆತನಿಗೆ ಮಾ.24 ರಂದು ಕೋರೋಣ ರೋಗ ಲಕ್ಷಣಗಳು ಆತನಲ್ಲಿ ಗೋಚರಿಸಿದವು. ಆತ ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ.
ಈ ನಡುವೆ ಆತ ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಆತ ಊರಿಡೀ ತಿರುಗಾಡಿದ್ದ. ಕ್ವಾರಂಟೈನ್ ಧಿಕ್ಕರಿಸಿ ಗೆಳೆಯರ ಜೊತೆ ಕ್ರಿಕೆಟ್ ಆಡಿದ್ದ. ಬೆಳ್ತಂಗಡಿಗೆ ಕೂಡಾ ಹೋಗಿ ಬಂದಿದ್ದ. ಆದ್ದರಿಂದ ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸಿಯವರು ಪೊಲೀಸರಿಗೆ ದೂರಿನಲ್ಲಿ ಸಲ್ಲಿಸಿದ್ದರು. ಅಂತೆಯೇ ಆತನ ಮೇಲೆ FIR ಕೂಡ ದಾಖಲಾಗಿತ್ತು.
ಕರಾಯದ ಜನತಾ ಕಾಲೋನಿ ನಿವಾಸಿಯಾದ ಆತ ದುಬೈ ನಿಂದ ಬಂದ ಮೇಲೆ ತನ್ನ ತಂದೆ ತಾಯಿಯ ಜತೆ ವಾಸಿಸುತ್ತಿದ್ದ. ಆತ ಬಂದ 21 ರಿಂದ 24 ರವರೆಗೆ ಮನೆಯಲ್ಲಿ ಇದ್ದುದರಿಂದ ಆತನ ತಂದೆ-ತಾಯಿಗೂ ಸೋಂಕು ತಗಲಬಹುದು ಎಂದು ಶಂಕಿಸಲಾಗಿತ್ತು.
ಅದರಂತೆ ಆತನ ತಾಯಿಯನ್ನು ಕ್ವಾರಂಟೈನ್ ಮಾಡಲಾಗಿತ್ತು ಮತ್ತು ಆತನ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರಿಬ್ಬರ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದಿದ್ದು ಅವರ ಗಂಟಲ ದ್ರವದ ಮಾದರಿಯನ್ನು ಸ್ವಾಮಿಗೆ ಕಳಿಸಿದ್ದು ಅದರ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಜತೆಗೆ ಆತ ಎತ್ತಿ ಆಡಿಸಿದ ಪಕ್ಕದ ಮನೆಯ ಮಗು ಕೂಡಾ ಆರೋಗ್ಯವಂತವಾಗಿದೆ.
ಸೋಂಕಿತ ವ್ಯಕ್ತಿಗೆ ಇನ್ನೂ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯುತ್ತಿದೆ.
ಸರಕಾರ ಕ್ವಾರಂಟೈನ್ ಅವಧಿಯನ್ನು 28 ದಿನಗಳವರೆಗೆ ಮುಂದುವರಿಸಿದ ಕಾರಣ ಇನ್ನೂ ಕರಾಯ ದಿಗ್ಬಂಧನದಲ್ಲಿದೆ.
cialis from india I lost my dog kiera suddenly driving home from the vets